*ಮಕರ ಸಂಕ್ರಾಂತಿಯ ಶುಭಾಷಯ ನಿಮ್ಮೆಲ್ಲರಿಗೂ*

*ದುಬಾಯಿಯ ರಾಹುಲ್ ಗಾಂಧಿ ಸಮಾವೇಶದ ಯಶಸ್ಸು ಡಾ.ಆರತಿಕೃಷ್ಣರವರಿಗೆ*

ದುಬೈನಲ್ಲಿ ರಾಹುಲ್ ಗಾಂಧಿ ಸಮಾವೇಶದ ರಂಗು ಜಗತ್ತು ಬೆರಗಾಗುವಂತೆ ಮಾಡಿತು..!! ಜನವರಿ 11, 12ರಂದು ಕಾಂಗ್ರೆಸ್ ಕಾರ್ಯಕ್ರಮಕ್ಕೆ ಎನ್‍ಆರ್‍ಐ ಸಾರಥ್ಯವಹಿಸಿ ಯಶಸ್ವಿ ಮೆಟ್ಟಿಲೇರಿದ *ಡಾ.ಆರತಿಕೃಷ್ಣ* ಸುಮಾರು 40,000ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಭಾಗಿಯಾಗಿ ಅಲ್ಲಿನ ನಿವಾಸಿ, ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಂವಾದ ಹಾಗೂ ಭಾರತೀಯ ಉದ್ಯಮಿಗಳ ಜತೆ ಚರ್ಚೆ ನಡೆಸಲು ಸಾರಥಿಯಾದರು ಎನ್ನಲು ಸಂಶಯ ಬೇಡ…. ಬಹುದಿನಗಳ ಬೇಡಿಕೆಯಾಗಿದ್ದ ರಾಹುಲ್ ಭೇಟಿ *ಆರತಿಕೃಷ್ಣರವರು*
ಅನಿವಾಸಿ ಭಾರತೀಯರ ಆಸೆ ಈಡೇರಿಸಿದರು,,,,
ಅದು ಭಾರತದಲ್ಲಲ್ಲ…. ಹೊರ ದೇಶದ ದುಬಾಯಿಯಲ್ಲಿ, ಈ ಸಮಾವೇಶದ ಆಯೋಜನೆಯ ಹೊಣೆಯನ್ನು ಅನಿವಾಸಿ ಭಾರತೀಯರ ಧೀರ-ದಿಟ್ಟ-ಪಾದರಸದಂತಹ ಅನಿವಾಸಿ ಭಾರತೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ *ಡಾ.ಆರತಿಕೃಷ್ಣ* ವಹಿಸಿಕೊಂಡಿದ್ದು ಬಹಳಷ್ಟು ಕಾಂಗ್ರೆಸ್ ಮುಖಂಡರಿಗೆ ಹುಬ್ಬೇರಿಸುವಂತಾಯಿತು… ಸೋನಿಯಾಜಿ ಕೂಡ *ಆರತಿಕೃಷ್ಣರವರಿಗೆ* ಯಶಸ್ವಿಯಾದ ಸಮಾವೇಶಕ್ಕೆ ಸಂತೋಷಪಟ್ಟಿದ್ದಾರೆ ಎಂದು ಮೂಲದಿಂದ ತಿಳಿದು ಬಂದಿದೆ.

ಸಮಾವೇಶಕ್ಕೆ ಮುನ್ನವೆ ರಾಹುಲ್ ಗಾಂಧಿ ಭಾರತೀಯ ಕಾರ್ಮಿಕರು, ಉದ್ಯಮಿಗಳ ಜತೆ ರಾಹುಲ್ ಚರ್ಚೆ ನಡೆಸಿದ್ದಾರೆ.

ಈ ಸಮಾವೇಶದ ಯಶಸ್ಸಿಗೆ ಈಗಾಗಲೇ *ಡಾ.ಆರತಿಕೃಷ್ಣ* ಹೆಸರು ಎಐಸಿಸಿಯ ಪುಸ್ತಕದಲ್ಲಿ ದಾಖಲಾಯಿತು ಎಂದು ಹೇಳಲಾಗಿದೆ.

ದೇಶದ ಹಲವಾರು ರಾಜ್ಯಗಳ ಭಾರತೀಯ ವಾಸಿಗಳ ಜತೆ ಕೆಪಿಸಿಸಿ ಎನ್‍ಆರ್‍ಐ ಸೆಲ್ ಅಧ್ಯಕ್ಷರಾದ *ಆರತಿಕೃಷ್ಣ* ಮಾತುಕತೆ ನಡೆಸಿ ಈ ಸಮಾವೇಶದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದ್ದರು, ಅಲ್ಲಿಯ ಮಾಧ್ಯಮದೊಂದಿಗೆ ಚರ್ಚೆಮಾಡಿ ಗೋಷ್ಠಿ ಕೂಡ ಮಾಡಿದ್ದರು.

ಅಬುಧಾಬಿಯ ಶೇಕ್ ಜಾಹೀದ್ ಮಸೀದಿಗೆ ಭೇಟಿ ನೀಡಿ ಬಳಿಕ ಅಬುಧಾಬಿಯ ಭಾರತೀಯ ಮೂಲದ ಉದ್ಯಮಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ರಾಹುಲ್ ಗಾಂಧಿ ಆಗಮನಕ್ಕೆ ಅಲ್ಲಿನ ಭಾರತೀಯರು ಕಾತುರದಿಂದ ಕಾಯ್ದಿದ್ದು, ದುಬೈ ಸ್ಟೇಡಿಯಂನಲ್ಲಿ ನಡೆಯುವ ಸಮಾವೇಶಕ್ಕೆ ಯಾವುದೇ ಶುಲ್ಕ ಇರಲಿಲ್ಲ,

ಸಮಾವೇಶಕ್ಕೆ ಬರುವವರಿಗೆ ಉಚಿತ ಬಸ್ ವ್ಯವಸ್ಥೆ, ಸಂಜೆ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು, ಎಲ್ಲಾ ರೀತಿಯ ತಯಾರಿ ನಡೆಸಿ ಯಾವುದೇ ಅಡ್ಡಿ ಆತಂಕವಿಲ್ಲದೆ ಬಹು ನಿರೀಕ್ಷಿತ ಸಮಾವೇಶಕ್ಕೆ ಅನೇಕರು ಶ್ರಮಿಸುತ್ತಿದ್ದಾರೆ ಅವರನ್ನು ನಾನು ಮರೆಯುವಂತಿಲ್ಲ ಎಂದು ಮುಕ್ತ ಕಂಠದಿಂದ *ಆರತಿಕೃಷ್ಣ* ಶ್ಲಾಘಿಸಿದರು, ಒಟ್ಟಾರೆಯಾಗಿ ಭಾರತದ ದಿಟ್ಟ ಮಹಿಳೆ ದೂರದ ದುಬಾಯಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಎಲ್ಲರ ಮನ ಮೆಚ್ಚುಗೆ ಪಾತ್ರರಾಗಿರುವುದು ಮರೆಯುವಂತಿಲ್ಲ…..!!

ಆರತಿಕೃಷ್ಣ ಅಭಿಮಾನಿ ಬಳಗ ಬೆಂಗಳೂರು.