ಸನ್ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನ ಸೌಧ
ಬೆOಗಳೂರು.
ವಿಷಯ -“ಛಲವಾದಿ /ಹೊಲೆಯ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು “
ಮಾನ್ಯರೇ,
ನಾವು ಛಲವಾದಿ /ಹೊಲೆಯ ಸಮುದಾಯಕ್ಕೆ ಸೇರಿದ ವಕೀಲರು,ಸಾಹಿತಿಗಳು,ಪತ್ರಕರ್ತರು,ಚಿಂತಕರು,ಹೋರಾಟಗಾರರು ಆದ ನಾವು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆOದರೇ,
ಪರಿಶಿಷ್ಟ ಜಾತಿಗಳಲ್ಲಿ (SC)ಒಂದಾದ ನಮ್ಮ ಹೊಲೆಯ ಅಥವಾ ಛಲವಾದಿ ಸಮುದಾಯ ಈ ಭಾರತೀಯ ಶ್ರೇಣಿಕೃತ ವ್ಯವಸ್ತೆಯಲ್ಲಿ ಅತ್ಯಂತ ಕೆಳ ಮಟ್ಟದಲ್ಲಿರುವ ಸಮುದಾಯವಾಗಿದೆ.ಮೂಲ ಅಸ್ಪೃಶ್ಯ ಜಾತಿಗೆ ಸೇರಿದವರಾದ ನಾವು ಇಂದಿಗೂ ಜಾತಿ ತಾರತಮ್ಯಕ್ಕೊಳಗಾಗಿ ಅವಕಾಶ ವಂಚಿತರಾಗಿ ಅತ್ಯಂತ ಕೆಟ್ಟ ಪರಿಸ್ಥಿತಿಯೊಳಗಿದ್ದೇವೆ.ಆದರೂ ಉಳಿದ ಪರಿಶಿಷ್ಟರ ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳಿಗೆ ಆಯಾ ಜಾತಿಗೊOದರಂತೆ ಎಲ್ಲರಿಗೂ ಕೊಟ್ಟಾಗ ಈ ಸಮುದಾಯಕ್ಕೆ ಕೊಡದಿದ್ದರೆ ತಾವು ಹೇಳಿದಂತೆ ಜನಸOಖ್ಯಾವಾರು ಅನುದಾನ ಬಿಡುವುದಾದರೆ ಹೊಲೆಯರಿಗೆ ಪ್ರತ್ಯೇಕ ನಿಗಮವಿಲ್ಲದೆ ಈ ವರ್ಗಕ್ಕೆ ಅಭಿವೃಧಿಗಾಗಿ ಅನುದಾನ ಬಿಡುಗಡೆ ಮಡುವುದಾದರು ಹೇಗೆ ?! ಈಗಾಗಲೇ
1)ಲಂಬಾಣಿ ತಾಂಡಾ ಅಭಿವೃಧಿ ನಿಗಮ
2)ಭೋವಿ ಅಭಿವೃದ್ಧಿ ನಿಗಮ
3)ಆದಿ ಜಾಂಬವ/ಮಾದಿಗ ಅಭಿವೃಧಿ ನಿಗಮ
4)ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಪೌರಕಾರ್ಮಿಕರಅಭಿವೃದ್ಧಿ ನಿಗಮ
5)ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃಧಿ ನಿಗಮ (ಲಿಡ್ಕರ್ )
6)ಸಫಾಯಿ ಕರ್ಮಚಾರಿ ಅಭಿವೃಧಿ ನಿಗಮ
ಹೀಗೆ /ಇತ್ಯಾದಿ ಜಾತಿಗೊOದರOತೆ ಹಾಗೂ ಜಾತಿಯಾಧಾರಿತ ಕುಲಕಸುಬು ಆಧಾರಿತ ಪ್ರತ್ಯೇಕ ಪ್ರತ್ಯೇಕವಾಗಿ ಅಭಿವೃಧಿ ನಿಗಮ ಸ್ಥಾಪಿಸಲಾಗಿದೆ.ಆದರೆ ಮೂಲ ಅಸ್ಪೃಶ್ಯರಾದ ಹೊಲೆಯ /ಛಲವಾದಿ ಜಾತಿಗೆ ಮಾತ್ರ ಅಭಿವೃಧಿ ನಿಗಮ ಸ್ಥಾಪಿಸಿಲ್ಲ.ಇದರಿOದಾಗಿ ತಾರತಮ್ಯಕ್ಕೊಳಗಾದ ಈ ಜಾತಿ ಜನರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃಧಿ ಸಾದಿಸಲು ಸಾಧ್ಯವಾಗುವುದಿಲ್ಲ.ಅದಕ್ಕಾಗಿ ತಾವು ಸಾಮಾಜಿಕ ನ್ಯಾಯದಡಿ ಸಮಾನ ಅವಕಾಶಗಳು /ಸವಲತ್ತುಗಳು ಹಂಚಿಕೆಯಾಗಬೇಕಾದರೆ ಹೊಲೆಯ /ಛಲವಾದಿ ಅಭಿವೃಧಿ ನಿಗಮ ಸ್ಥಾಪಿಸಬೇಕು.ನಿಗಮದ ಮೂಲಕ ಈ ಸಮುದಾಯದ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಬೇಕೆOಬ ಆಗ್ರಹ ನಮ್ಮದಾಗಿದೆ.
ಸಮಾಜ ಕಲ್ಯಾಣ ಸಚಿವರು ಈಗ ಅಸ್ಥಿತ್ವದಲ್ಲಿರುವ ಪ್ರತಿ ನಿಗಮಕ್ಕೆ ಜನಸಂಖ್ಯಾವಾರು ಹಣ ಹಂಚಿಕೆ ಮಾಡಲಾಗುವದೆOದು ಈಗಾಗಲೇ ರೂಪಾಯಿ 600 ಕೋಟಿ ಮೀಸಲಿಟ್ಟಿದ್ದರ ಬಗ್ಗೆ ತಿಳಿಸಿದ್ದಾರೆ.ಹಾಗಾದರೆ ನಮ್ಮ ಸಮುದಾಯದ ಅಭಿವೃಧಿ ನಿಗಮವನ್ನು ಸ್ಥಾಪಿಸಿಲ್ಲವಾದ್ದರಿOದ ಹೊಲೆಯ /ಛಲವಾದಿ ಅಭಿವೃದ್ಧಿಗಾಗಿ ಯೋಜನೆಗಳನ್ನೇ ರೂಪಿಸುವುದಿಲ್ಲವೆOದರ್ಥವೆ ? ಇದು ನಮ್ಮನ್ನು ಕಾಡುವ ಆತಂಕಕಾರಿ ವಿಷಯ.
ಡಾ.ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳಾದಾರದಲ್ಲಿ ಎಲ್ಲಾ ಶೋಷಿತರ ಪರವಾಗಿ ದ್ವನಿ ಎತ್ತುವ ಈ ಸಮುದಾಯವನ್ನೇ ಕಡೆಗಣಿಸಿದರೆ ಹೇಗೆ ? ಸಾಮಾಜಿಕ ನ್ಯಾಯದ ಆಧಾರದಲ್ಲಿ ಆಡಳಿತ ನಡೆಸುವ ಮತ್ತು ಬಾಬಾಸಾಹೇಬರ ಮೇಲೆ ಅಪಾರ ಪ್ರೀತಿ ಹೊOದಿರುವ ನಮ್ಮ ನಾಡಿನ ಮುಖ್ಯ ಮಂತ್ರಿಗಳಾದ ನೀವು ಬರುವ ಏಪ್ರಿಲ್ 14,2018 ರ ಡಾ.ಬಾಬಾಸಾಹೇಬ್ ಅಂಬೇಡ್ಕರರ ಜಯಂತ್ಯೋತ್ಸವದ ಒಳಗಾಗಿ ಈ ಹೊಲೆಯ /ಛಲವಾದಿ ಅಭಿವದ್ಧಿ ನಿಗಮ ಸ್ಥಾಪಿಸಿ ಈ ಸಮುದಾಯದ ಪ್ರೀತಿಗೆ ಭಾಜನರಾಗಬೇಕೆOದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇವೆ.
ಧನ್ಯವಾದಗಳೊOದಿಗೆ.

ಸ್ಥಳ : ತಮ್ಮ
ಹೀಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಇಂದು ಮುಖ್ಯಮಂತ್ರಿಗಳಿಗೆ ಕೊಡಬೇಕಾಗಿತ್ತು. ಆದರೆ ಅನಿವಾರ್ಯ ಕಾರಣಗಳಿOದ ನಾಳೆ ಕೊಡುವ ನಿರ್ಧಾರ ಮಾಡಲಾಗಿದೆ.
ವಕೀಲರಾದ ಸುಭಾಸ್ ಮಣ್ಣಪ್ಪಗೋಳ,ರವಿ ಕಾOಬಳೆ,ಶಶಿಕಾOತ ಬಾಡಗಿ,ರಮೇಶ ಸಾಲಿಮನಿ,ಸಂತೋಶ ದರೂರ,ಸಂಗಮೇಶ ಕಂದಾರೆ,ಎಮ್ ಎಸ್ ತಳಕೇರಿ,ಮಹಾದೇವ ಇಟಿ,ಆರ್ ಪಿ ಅಸೋದೆ,ಸಹದೇವ ಕಾOಬಳೆ,ಪ್ರಮೋದ ಹೀರೆಮನಿ,ಕುಶಾಲ್ ಕಾOಬಲೆ ಹಾಗೂ ಇನ್ನೂ ಅನೇಕ ದಲಿತ ಮುಖOಡರೂ,ಸಾಹಿತಿಗಳು ಹೀಗೆ ಮುOತಾದವರನೇಕರು ಸಹಿ ಮಾಡಿದ ಮೇಲಿನ ಮನವಿ ಪತ್ರವನ್ನು ನಾಳೆ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲಾಗುವುದು.
ಬಂದುಗಳೆ ನೀವು ಸಹ ನಿಮ್ಮ ನಿಮ್ಮ ತಾಲೂಕು ತಹಶಿಲ್ದಾರರ/ಜಿಲ್ಲಾಧಿಕಾರಿಗಳ ಮೂಲಕ ಇಂತದೊOದು ಮನವಿ ತಯಾರಿಸಿ ಕಳುಹಿಸುವ ಕೆಲಸ ಮಾಡಬೇಕೆOದು ತಮ್ಮಲ್ಲಿ ನನ್ನ ಮನವಿ ಇರುತ್ತದೆ.
ಡಾ.ಗೌತಮ್ ಬನಸೋಡೆ