ಸಾಹಸ ಕ್ರೀಡಾ ತರಬೇತಿ ಶಿಬರಿ

ಬೆಂಗಳೂರು: ಜುಲೈ 5, 2016: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿ ವತಿಯಿಂದ 2016-17ಸಾಲಿನ ಜಲ ಸಾಹಸ ಹಾಗೂ ಭೂ ಸಾಹಸ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಈ ತರಬೇತಿ ಶಿಬಿರಗಳನ್ನು ಅಕಾಡೆಮಿಯು ಹೊಂದಿರುವ ಸಾಹಸ ಕೇಂದ್ರಗಳಲ್ಲಿ ಹಾಗೂ ರಾಜ್ಯ ವಿವಿಧೆಡೆ ಸ್ಥಳಗಳಲ್ಲಿ ಲಭ್ಯವಿರುವ ಸೌಲಭ್ಯಗಳನುಸಾರ ಆಯೋಜಿಸಲಾಗುವುದು.

16 ರಿಂದ 35 ವರ್ಷ ವಯೋಮಿತಿಯ ಯುವ ಜನರಿಗೆ ಜಲಸಾಹಸ ಮತ್ತು ಭೂ ಸಾಹಸ ಕ್ರೀಡೆಗಳಾದ ರಿವರ್ ರ್ಯಾಪ್ಟಿಂಗ್, ವೈಟ್‍ವಾಟರ್ ರ್ಯಾಪ್ಟಿಂಗ್, ಟ್ರಕ್ಕಿಂಗ್, ಪ್ರಕೃತಿ ಅಧ್ಯಯನ ಶಿಬಿರ, ಓರಿಯಂಟೇಷನ್‍ನಲ್ಲಿ ಬೇಸಿಕ್ ಹಾಗೂ ಅಡ್ವಾನ್ಸ್ ತರಬೇತಿ ಶಿಬಿರಗಳನ್ನು ಜುಲೈನಿಂದ ಸೆಪ್ಟೆಂಬರ್‍ವರೆಗೆ ನಡೆಸಲಾಗುವುದು.

ಆಸಕ್ತ ಯುವ ಜನರು ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರುು ನಗರ ಜಿಲ್ಲೆ, ಗೇಟ್ ನಂ.-12ರ ಕೊಠಡಿ ಸಂಖ್ಯೆ 17 ಕಸ್ತೂರಿ ಬಾ ರಸ್ತೆ, ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರುು -01 ದೂರವಾಣಿ ಸಂಖ್ಯೆ 080-22239771 ಮೊ. 9480886470, 9480886470 ಅನ್ನು ಸಂಪರ್ಕಿಸಬಹುದು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎಲ್.ದೇವಿಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿಗಾಗಿ ಮಕ್ಕಳಿಂದ ಅರ್ಜಿ ಆಹ್ವಾನ

ಬೆಂ. ನ. ಜು. 19: ಭಾರತ ಸರ್ಕಾರವು ಶಿಕ್ಷಣ, ಕಲೆ, ಸಾಂಸ್ಕøತಿಕ ಚಟುವಟಿಕೆಗಳು, ಕ್ರೀಡೆ ಹಾಗೂ ಕೇಂದ್ರ ಆಯ್ಕೆ ಸಮಿತಿ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ 5 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ರಾಷ್ಟ್ರ ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಲು ಆಯ್ಕೆ ಪ್ರಕ್ರಿಯೆಗಾಗಿ ಅರ್ಜಿ ಆಹ್ವಾನಿಸಿದೆ.

ಈ ಸಂಬಂಧ ಹೆಚ್ಚಿನ ವಿವರಗಳಿಗೆ 080-22239771 ಅಥವಾ ಮೊಬೈಲ್ ಸಂಖ್ಯೆ 9480886470 ಗೆ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕರಾದ ಶ್ರೀಮತಿ ಎಂ.ಎಲ್.ದೇವಿಕಾ ತಿಳಿಸಿದ್ದಾರೆ.

ಯುವ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

ಬೆಂ. ನ. ಜು. 19: ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ 15 ರಿಂದ 35 ವರ್ಷದ ವಯೋಮಿತಿಯ ಯುವಕ ಅಥವಾ ಯುವತಿಯರನ್ನು ಒಳಗೊಂಡ ಯುವಕ ಮತ್ತು ಯುವತಿ ಸಂಘಗಳು, ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಸ್ಥಳೀಯ ಅಭಿವೃದ್ಧಿ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು, ನೆಹರು ಯುವಕ ಕೇಂದ್ರಗಳು, ರಾಷ್ಟ್ರೀಯ ಯುವ ಸಂಸ್ಥೆಗಳು ಇತ್ಯಾದಿಗಳು ಪ್ರಶಸ್ತಿಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ.

ಜಿಲ್ಲಾ ಭಾರತೀಯ ಪ್ರಜೆಯಾಗಿದ್ದು, ವಾಸಿಸುತ್ತಿರುವ ಜಿಲ್ಲೆಯಿಂದ ಅರ್ಜಿ ಸಲ್ಲಿಸಲು ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ವರದಿ ಪಡೆದು ಸಲ್ಲಿಸಬೇಕು. ಪ್ರಶಸ್ತಿಗೆ ಆಹ್ವಾನಿಸಿದÀ ಸಂಘ ಅಥವಾ ಸಂಬಂಧಪಟ್ಟ ಅಭ್ಯರ್ಥಿ 2013-14ನೇ ಸಾಲಿನಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಮಾತ್ರ ಉಲ್ಲೇಖಿಸಬೇಕು. ಸಾಧನೆ ಮಾಡಿದ ಬಗ್ಗೆ ಕಾರ್ಯಕ್ರಮದ ದಿನಾಂಕ, ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಫೋಟೋ, ಪತ್ರಿಕಾ ವರದಿ, ದೃಢೀಕರಣ ಪತ್ರಗಳು ಇತ್ಯಾದಿ ವಿವರಗಳನ್ನು ಒಂದೇ ಕಡೆ ಲಭ್ಯವಿರುವಂತೆ ಪ್ರಸ್ತಾವನೆಯೊಂದಿಗೆ ಕಳುಹಿಸಬೇಕು. ಪತ್ರಿಕಾ ವರದಿಯ ಮೂಲ ಪ್ರತಿಯನ್ನು ದಿನಾಂಕದೊಂದಿಗೆ ಹಾಗೂ ಬ್ಯಾನರ್‍ಗಳು ಮತ್ತು ಛಾಯಾಚಿತ್ರಗಳಲ್ಲಿ ದಿನಾಂಕವನ್ನು ಸ್ಪಷ್ಟವಾಗಿ ಕಾಣುವಂತೆ ಒದಗಿಸತಕ್ಕದ್ದು. ಪ್ರಸ್ತಾವನೆಯು ಎ4 ಅಳತೆಯ ಕಾಗದದಲ್ಲಿ ಸ್ಪಷ್ಟವಾಗಿ ಆಂಗ್ಲಭಾಷೆಯಲ್ಲಿ, ದ್ವಿಪ್ರತಿಗಳಲ್ಲಿ ನಿಗದತಿ ಅರ್ಜಿ ನಮೂನೆಯೊಂದಿಗೆ ಸಲ್ಲಿಸಲು ಕೋರಿದೆ.

ಅರ್ಹ ಯುವಕ – ಯುವತಿಯರು ಹಾಗೂ ನೊಂದಾಯಿತ ಯುವಕ-ಯುವತಿ ಸಂಘಗಳು ತಮ್ಮ ವೈಯಕ್ತಿಕ / ಸಾಂಘಿಕ ಪ್ರಸ್ತಾವನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು ಇಲ್ಲಿಗೆ ಸಲ್ಲಿಸತಕ್ಕದ್ದು, ಹೆಚ್ಚಿನ ವಿವರಗಳಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಈ ಕಛೇರಿಯ ಸಹಾಯವಾಣಿ ಸಂಖ್ಯೆ 080-22239771 ಅಥವಾ ಮೊಬೈಲ್ ಸಂಖ್ಯೆ: 9480886470 ಗೆ ಸಂಪರ್ಕಿಸಬಹುದಾಗಿದೆ.

ಅತ್ಯುತ್ತಮ ಕ್ರೀಡಾ ಸಂಘಗಳಿಗೆ 25 ಸಾವಿರ ಪ್ರೋತ್ಸಾಹಧನ

ಬೆಂ. ನ. ಜು. 15: ಕರ್ನಾಟಕ ರಾಜ್ಯವು ನಿಗಧಿಪಡಿಸಿದ ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ವಿಜೇತರಾದವರನ್ನು ಸದಸ್ಯರನ್ನಾಗಿ ಮಾಡಿಕೊಂಡು ಅತ್ಯುತ್ತಮವಾಗಿ ಸ್ಥಳೀಯ ಕ್ರೀಡಕೂಟಗಳನ್ನು ಆಯೋಜಿಸಿ, ಕ್ರೀಡಾ ತರಬೇತಿ ನೀಡುತ್ತಿರುವ ಪ್ರತಿ ಹೋಬಳಿಗೆ ಒಂದು ಕ್ರೀಡಾ ಸಂಸ್ಥೆಗಳನ್ನು ಗುರುತಿಸಿ, ಯುವ ಕ್ರಿಡಾ ಮಿತ್ರ ಯೋಜನೆಯಡಿ ರೂ. 25,000/- ಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಅರ್ಹ ಸಂಘ ಸಂಸ್ಥೆಗಳು ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಿರುವವರು ಸದರಿ ಪ್ರೋತ್ಸಾನಧನ ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಇವರಿಂದ ಪಡೆಯಬಹುದಾಗಿದೆ.

ರಾಗಿ ಬೆಳೆ ವಿಮೆ

ಬೆಂ. ನ. ಜು. 13 : ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಆಲಿಕಲ್ಲುಮಳೆ, ಭೂ ಕುಸಿತ, ಬೆಳೆ ಮುಳುಗಡೆ ಮತ್ತು ಕಟಾವಿನ ಸಂದರ್ಭದಲ್ಲಿ ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದಾಗುವ ಬೆಳೆ ನಷ್ಟದ ಪರಿಹಾರವಾಗಿ ರೈತರಿಗೆ ಆರ್ಥಿಕ ಭದ್ರತೆ ಕಲ್ಪಿಸಲು ರೈತ ಸುರಕ್ಷಾ ಪ್ರಧಾನಮಂತ್ರಿ ಭೀಮಾ ಯೋಜನೆಯಡಿ ಜಿಲ್ಲೆಯ ಮುಖ್ಯ ರಾಗಿ ಬೆಳೆಗೆ ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಕೋರಿದೆ.

ಬೆಳೆ ವಿಮೆ ಮಾಡಿಸಲು ಜುಲೈ 30 ಕೊನೆಯ ದಿವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯ್ಲಲಿ ತಿಳಿಸಿದ್ದಾರೆ.

ಹಣ ದುರುಪಯೋಗ – ಏಜೆನ್ಸಿ ರದ್ದು

ಬೆಂಗಳೂರು: ಜುಲೈ 13, 2016: ಸಣ್ಣ ಉಳಿತಾಯ ಎಂ.ಪಿ.ಕೆ.ಬಿ.ವೈ.. ಏಜೆಂಟ್, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಂಚೆ ಕಛೇರಿ ಹಾಗೂ ಎಸ್.ಎ.ಎಸ್. ಏಜೆಂಟರಾಗಿ ರಾಜಾಜಿನಗರ, ಮುಖ್ಯ ಅಂಚೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಕೆ.ಪದ್ಮಾವತಿ ಅವರು ಹಣ ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಎರಡು ಏಜೆನ್ಸಿಗಳನ್ನು ರದ್ದುಪಡಿಸಲಾಗಿದೆ.

ಸಾರ್ವಜನಿಕರು ಇವರ ಏಜೆನ್ಸಿ ಮೂಲಕ ಯಾವುದೇ ಠೇವಣಿ ಮಾಡಬಾರದೆಂದು ಬೆಂಗಳೂರು ಉತ್ತರ ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿದ್ದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಬೆಂ. ನ. ಜು. 20 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಡಿ ಬೆಮಗಲೂರು ಕೇಂದ್ರದಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಮಡಿವಾಳ, ದೂ ಸಂ: 080-22234490 ಅನ್ನು ಸಂಪರ್ಕಿಸುವಂತೆ

ಅಲ್ಪಸಂಖ್ಯಾತ ಜನಾಂಗದವರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು, ಜೂನ್, 17: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿಗೆ ಬೆಂಗಳೂರು ನಗರ ಜಿಲ್ಲೆಯ (ಕೇಂದ್ರೀಯ ಮತ್ತು ದಕ್ಷಿಣ ವಿಭಾಗ ವಿಭಾಗ) ನಿಗಮದ ಸಾಲದ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರ ಜನಾಂಗದವರಿಂದ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು, ಜೈನ್, ಬೌದ್ಧ ಮತ್ತು ಪಾರ್ಸಿ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗಮದ ಯೋಜನೆಗಳ ವಿವರ:
1. ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ 2. ಶ್ರಮಶಕ್ತಿ ಸಾಲ ಯೋಜನೆ 3. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಗಳು 4. ಸಣ್ಣ (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆ 5.ಸ್ವಾವಲಂಬನಾ ಮಾರ್ಜಿನ್ ಹಣ ಸಾಲ ಮತ್ತು ಸಹಾಯಧನ ಯೋಜನೆ

ಅರ್ಹತೆಗಳು:

1) ನಿಗಮದ ಎಲ್ಲಾ ಯೋಜನೆಗಳಲ್ಲಿ 80:0:10 ಅನುಪಾತದಲ್ಲಿ ಅಂದರೆ ಶೇಕಡ 80 ರಷ್ಟು ಮುಸ್ಲಿಂ, ಶೇಕಡ 10 ರಷ್ಟು ಕ್ರೈಸ್ತರು ಹಾಗೂ ಶೇಕಡ 10 ರಷ್ಟು ಇತರೆ (ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಗೆ ಸೌಲಭ್ಯವನ್ನು ಒದಗಿಸಲಾಗುವುದು.

2) ನಿಗಮದ ಎಲ್ಲಾ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಆದ್ಯತೆ ತಪ್ಪದೆ ಒದಗಿಸಲಾಗುವುದು.

3) ಎಲ್ಲಾ ಯೋಜನೆಗಳಲ್ಲಿ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಶೇ. 3 ರಷ್ಟು ಗುರಿಯನ್ನು ಆದ್ಯತೆ ಒದಗಿಸಲಾಗುವುದು.

4) ಆರ್ಥಿಕ ನೆರವು ಪಡೆಯಲಿಚ್ಚಿಸುವ ಅರ್ಜಿದಾರರು ಸರ್ಕಾರವು ಅಂಗೀಕರಿಸಿದ ಅಲ್ಪಸಂಖ್ಯಾತ ವರ್ಗಗಳ ಪ್ರವರ್ಗ-1, ಪ್ರವರ್ಗ – 2, 2ಬಿ, 3ಎ, ಮತ್ತು 3 ಬಿ ಗುಂಪಿಗೆ ಸೇರಿದವರಾಗಿರಬೇಕು.

5) ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 1,03,000-00 ಮೀರಿರಬಾರದು (ಅರಿವು ಯೋಜನೆಗೆ ಹೊರತುಪಡಿಸಿ)

6) ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸವಾಗಿರಬೇಕು.

7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳು.

8) ಅರ್ಜಿದಾರರು ತಮ್ಮ ವಿಳಾಸದ ಧೃಢೀಕರಣಕ್ಕಾಗಿ ಆಧಾರ್ (ಯುಐಡಿ) ಪ್ರತಿಯನ್ನು ಲಗತ್ತಿಸಿ, ಅದನ್ನು ಅವರ ಬ್ಯಾಂಕ್ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು ಮತ್ತು ಇತರೆ ಮಾನ್ಯವಾಗಿರುವ ದಾಖಲಾತಿಗಳನ್ನು ಲಗತ್ತಿಸಬೇಕು.

9) ಅರ್ಜಿದಾರರು ಖುದ್ದಾಗಿ ಬಂದು ಅರ್ಜಿಯನ್ನು ಸಲ್ಲಿಸುವುದು ಹಾಗೂ ಒಂದು ಅರ್ಜಿದಾರರಿಂದ ಒಂದೇ ಅರ್ಜಿಯನ್ನು ಸ್ವೀಕರಿಸಲಾಗುವುದು.

10) ಅರ್ಜಿದಾರರು ಅರ್ಜಿ ಸಲ್ಲಿಸುವ ಸಮಯದಲ್ಲಿ ಪೂರ್ಣ ದಾಖಲಾತಿಗಳನ್ನು ಸಲ್ಲಿಸುವುದು. ಅಪೂರ್ಣ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

11) ಈ ಹಿಂದೆ ನಿಗಮದ ಸಾಲ ಸೌಲಭ್ಯ ಪಡೆದವರು ಮತ್ತೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

ಸಾಲದ ಅರ್ಜಿ ನಮೂನೆಯನ್ನು ನಿಗಮದ ವೆಬ್‍ಸೈಬ್ www.kmdc.kar.nic.in ಅಥವಾ kmdc.karnataka.gov.in   ಮೂಲಕ ಪಡೆಯಬಹುದು. ಸಾಲದ ಅರ್ಜಿಯನ್ನು ಜೂನ್ 30, 2016 ರೊಳಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಹಮೀದ್ ಷಾ ಕಾಂಪ್ಲೆಕ್ಸ್, 2ನೇ ಮಹಡಿ, ಎಸ್.ಎಫ್.2, ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ಹಿಂಭಾಗ, ಕಬ್ಬನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22114815, 22114817 ಸಂಪರ್ಕಿಸಬಹುದು.

ಅಲ್ಪಸಂಖ್ಯಾತ ಸಮುದಾಯದವರಿಗಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು

ಬೆಂಗಳೂರು, ಜೂನ್, 10: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿಗೆ ಬೆಂಗಳೂರು ನಗರ ಜಿಲ್ಲೆಯ (ಉತ್ತರ ವಿಭಾಗ) ಖಾಯಂ ಆಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಜನಾಂಗದವರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಜನಾಂಗದವರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸ್ವಾವಲಂಬನ ಸಾಲದ ಯೋಜನೆ: ಬ್ಯಾಂಕುಗಳ ಸಹಯೋಗದೊಂದಿಗೆ ಅನುಷ್ಠಾನ ಸಾಲದ ಮಿತಿ ರೂ. 1.00 ರಿಂದ 5.00 ಲಕ್ಷಗಳವರೆಗೆ ಇರುತ್ತದೆ. ಯೋಜನಾ ವೆಚ್ಚದ ಶೇ. 20 ಭಾಗದ ಹಣವನ್ನು ನಿಗಮವು ಮಾರ್ಜಿನ್ ಹಣ ಸಾಲದ ರೂಪದಲ್ಲಿ ಮಂಜೂರು ಮಾಡಲಿದ್ದು, ಹಾಗೂ ಸಾಲದ ಯೋಜನೆಯ ಒಟ್ಟು ಯೋಜನಾ ವೆಚ್ಚದಲ್ಲಿ ಶೇ 5 ರಷ್ಟು ಅಥವಾ ಗರಿಷ್ಠ ರೂ. 25000/- ಗಳಷ್ಟು ಸಹಾಯಧನ ಮಂಜೂರು ಮಾಡಲಾಗುವುದು.

ಅರಿವು ವಿದ್ಯಾಭ್ಯಾಸ ಸಾಲ ಯೋಜನೆ: ಈ ಯೋಜನೆಯಲ್ಲಿ ಒಟ್ಟು 50 ವೃತ್ತಿಪರ ಕೋರ್ಸ್‍ಗಳಾದ ಎಂ.ಬಿ.ಬಿ.ಎಸ್., ಬಿ.ಇ., ಡೆಂಟಲ್, ಬಿ.ಸಿ.ಎಂ., ಬಿ.ಬಿ.ಎಂ., ಎಂ.ಎ., ಎಂ.ಎಸ್.ಸಿ., ಬಿ.ಇಡಿ., ನರ್ಸಿಂಗ್ ಡಿಪ್ಲೋಮಾ, ಐ.ಟಿ.ಐ ಇತರೆ ಕೋರ್ಸ್‍ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಅವರ ಕೋರ್ಸ್‍ಗಳಿಗೆ ಅನುಗುಣವಾಗಿ ರೂ. 5,000/- ಗಳಿಂದ ರೂ. 50,000/- ಗಳವರೆಗೆ ಶೇ. 2ರ ಬಡ್ಡಿದರದಲ್ಲಿ ಕೋರ್ಸ್ ಮುಗಿಯುವವರೆಗೂ ಪ್ರತಿ ವರ್ಷ ಸಾಲ ನೀಡಲಾಗುವುದು.

ಶ್ರಮಶಕ್ತಿ ಸಾಲದ ಯೋಜನೆ: ಬೆಂಗಳೂರು ನಗರ ಜಿಲ್ಲೆ (ಉತ್ತರ) ಕುಶಲಕರ್ಮಿಗಳು, ಕುಲಕಸಬುದಾರರಿಗೆ ಅವರ ಕಸುಬು ಮುಂದುವರೆಸಲು ರೂ 50,000/- ಗಳನ್ನು ನೇರವಾಗಿ ನೀಡಲಾಗುವುದು. ಇದರಲ್ಲಿ ಶೇ. 50 ರಷ್ಟು ಸಬ್ಸಿಡಿ ಇರುತ್ತದೆ.

ಮೈಕ್ರೋ (ಕಿರು) ಸಾಲದ ಯೋಜನೆ: ಈ ಯೋಜನೆಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ನಿಯಮಾನುಸಾರ ರಚನೆಗೊಂಡು ಒಂದು ವರ್ಷಗಳಿಂದ ಬ್ಯಾಂಕ್ ಖಾತೆ ಹಾಗೂ ಐ.ಎಫ್‍ಎಸ್.ಸಿ. ಕೋಡ್ ಹೊಂದಿದ ಸ್ವ-ಸಹಾಯ ಗುಂಪುಗಳ ಪ್ರತಿ ಸದಸ್ಯರಿಗೆ ರೂ. 10,000/- ಗಳಂತೆ ಸಾಲ ನಿಡಲಾಗುವುದು. ಇದರಲ್ಲಿ ಶೇ. 50 ರಷ್ಟು ಸಬ್ಸಿಡಿ ಇರುತ್ತದೆ.

ಗೃಹ ಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆ;

ಅರ್ಹತೆಗಳು: ಬೆಂಗಳೂರು ನಗರ ಜಿಲ್ಲೆಯ (ಉತ್ತರ) ನಿವಾಸಿಯಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು 55 ವರ್ಷಗಳಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 1.3 ಲಕ್ಷ ಮಿತಿಯಲ್ಲಿರಬೇಕು. ಸಂಬಂಧಿಸಿದ ಬ್ಯಾಂಕಿನ ಖಾತೆ ಹಾಗೂ ಐಎಫ್‍ಎಸ್‍ಸಿ ಕೋಡ್ ಕಡ್ಡಾಯವಾಗಿ ಸಲ್ಲಿಸುವುದು. ಅರ್ಜಿದಾರರು ತಮ್ಮ ವಿಳಾಸದ ದೃಢೀಕರಣಕ್ಕಾಗಿ ಆಧಾರ (ಯುಐಡಿ) ಪ್ರತಿಯನ್ನು ಸಲ್ಲಿಸಬೇಕು ಮತ್ತು ಅದನ್ನು ಅವರ ಬ್ಯಾಂಕ್‍ನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಬೇಕು.

ಅರಿವು ವಿದ್ಯಾಭ್ಯಾಸ ಸಾಲದ ಯೋಜನೆಯಲ್ಲಿ ವಾರ್ಷಿಕ ಆದಾಯ ರೂ. 6.00 ಲಕ್ಷಗಳ ಮಿತಿಯಲ್ಲಿರಬೇಕು ಹಾಗೂ ಸಂಬಂಧಿಸಿದ ಕಾಲೇಜಿನ ಬ್ಯಾಂಕ್ ಖಾತೆ ಹಾಗೂ ಐ.ಎಫ್.ಎಸ್.ಸಿ. ಕೋಡ್ ಪ್ರಿನ್ಸಪಲ್ ಅವರಿಂದ ದೃಢೀಕರಿಸತಕ್ಕದ್ದು. ಅರ್ಜಿದಾರರ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 4 ಭಾವಚಿತ್ರ ಹಾಗೂ ಜಾಮೀನುದಾರರ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 4 ಭಾವಚಿತ್ರ .

ಈಗಾಗಲೇ ಕೆ.ಎಂ.ಡಿ.,ಸಿ. ಯಿಂದ ಸಹಾಯಧನ ಯೋಜನೆಯಡಿ ಸಬ್ಸಿಡಿ/ಮಾರ್ಜಿನ್‍ಮನಿ/ನೇರ ಸಾಲ/ಶ್ರಮಶಕ್ತಿ/ಮೈಕ್ರೋ ಸಾಲ ಯೋಜನೆಯಡಿಯಲ್ಲಿ ಸಾಲ ಪಡೆದಿರುವ ಈಗಿನ ಘಟಕಗಳು ಮತ್ತು ಅಭ್ಯರ್ಥಿಗಳು ಅರ್ಹರಲ್ಲ. ಈ ಯೋಜನೆಯಲ್ಲಿ ಒಂದೇ ಕುಟುಂಬದ ಓರ್ವ ವ್ಯಕ್ತಿ ಮಾತ್ರ ಹಣಕಾಸು ನೆರವು ಪಡೆಯಲು ಅರ್ಹರಿರುವರು.

ಅರ್ಜಿ ಭರ್ತಿ ಮಾಡಿ ಮೊಬೈಲ್ ಸಂಖ್ಯೆಯೊಂದಿಗೆ ಜೂನ್ 30, 2016 ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯತರ ಅಭಿವೃದ್ಧಿ ನಿಗಮ, ನಂ 92, 4ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಪಾಪಣ್ಣ ಬ್ಲಾಕ್, ಗಂಗಾನಗರ, ಬೆಂಗಳೂರು ನಗರ ಜಿಲ್ಲೆ, ಉತ್ತರ ವಿಭಾಗ, ಬೆಂಗಳೂರು ಇವರಿಗೆ ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-23539786 ಸಂಪರ್ಕಿಸಬಹುದು.

ಅತ್ಯುತ್ತಮ ಕ್ರೀಡಾ ಸಾಧನೆಗಳಿಗೆ 25 ಸಾವಿರ ಪ್ರೋತ್ಸಾಹಧನ

ಬೆಂಗಳೂರು ಜೂನ್ 27: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕ್ರೀಡಾ ಸಂಸ್ಕøತಿಯನ್ನು ಬೆಳಸಲು ಕ್ರೀಡಾ ಸಂಘಗಳ ಸ್ಥಾಪನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಗೊಂದು ಕ್ರೀಡಾ ಮತ್ತು ಸಂಘವನ್ನು ಸ್ಥಾಪಿಸಿ ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಪ್ರತಿಭೆಗಳನ್ನು ಗುರುತಿಸಲು ಯುವ ಸಬಲೀಕರಣ ಕ್ರೀಡಾ ಇಲಾಖೆಯು ಪ್ರೋತ್ಸಾಹಧನವಾಗಿ ಪ್ರತಿ ಹೋಬಳಿಗೆ ಒಂದು ಕ್ರೀಡಾ ಸಂಘಕ್ಕೆ ವಾರ್ಷಿಕ ತಲಾ 25 ಸಾವಿರ ನಗದು ಪ್ರೋತ್ಸಾಹ ಧನ ನೀಡಲಿದೆ.

ಅರ್ಹ ಹಾಗೂ ನೋಂದಾವಣೆಗೊಂಡಿರುವ ಕ್ರೀಡಾ/ಸಂಘ ಸಂಸ್ಥೆಗಳು ಕ್ರೀಡಾ ವರದಿಗಳನ್ನೊಳಗೊಂಡ, ಪೋಟೊ ಪ್ರತಿ ಸಮೇತ ನೋಂದಾವಣೆಯಾಗಿರುವ ಸಂಸ್ಥೆಗಳ ವಿವರಗಳೊಂದಿಗೆ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಕೋರಿದೆ.

ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು. ದೂರವಾಣೆ ಸಂಖ್ಯೆ: 08022239771, ಮೊಬೈಲ್ ಸಂಖ್ಯೆ: 9480886470 ಸಂಪರ್ಕಿಸಬಹುದು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಆನೆಲೈನ್‍ನಲ್ಲಿ ಜಮಾ

ಬೆಂಗಳೂರು ಜೂನ್ 27: ಹಿಂದುಳಿದ ವರ್ಗಗಳ ಇಳಾಖೆಯ ಮೂಲಕ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಆನ್ ಲೈನ್ ಮೂಲಕ ಬ್ಯಾಂಕ್ ಖಾತೆಗೆ ಮೂಡಲು ಉದ್ದೇಶಿಸಿದೆ.

ಹಿಂದುಳಿದ ವರ್ಗಗಳ ಪ್ರವರ್ಗ=1 ವಿದ್ಯಾರ್ಥಿಗಳಿಗೆ ರೂ.1 ಲಕ್ಷ ಹಾಗೂ ಪ್ರವರ್ಗ-2ಎ,3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ 44,500/-ರೂ. ನಿಗದಿಪಡಿಸಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕೂಡಲೇ ವಿದ್ಯಾರ್ಥಿ ಮತ್ತು ತಾಯಿಯ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರದು ಬ್ಯಾಂಕ್ ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆ, ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, ಹೊಂದಿದಲ್ಲಿ ಜೆರಾಕ್ಸ್ ಪ್ರತಿಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಬೇಕು.

ಶಾಲಾ ಮುಖ್ಯೋಪಾಧ್ಯಾಯರುಗಳು ಹಿಂದೂಲಿದ ವರ್ಗಗಳ ಇಲಾಖೆಯಿಂದ ನೀಡಲಾಗಿರುವ ವಿವರಗಳನ್ನು ಭರ್ತಿ ಮಾಡಿ ವಿಧ್ಯಾರ್ಥಿಗಳಿಂದ ಪಡೆದ ಬ್ಯಾಂಕ್ ಪುಸ್ತಕದ ಪ್ರತಿ, ಜಾತಿ ಮತ್ತು ಆಧಾರ ಪ್ರತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಲು ಕೋರಿದೆ.

ಉದ್ಯೋಗಿನಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು: ಜೂ 21. (ಕರ್ನಾಟಕ ವಾರ್ತೆ): ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲಿಚ್ಫಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಮಹಿಳೆಯರು ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳಿಂದ ಅರ್ಜಿ ಆಹ್ವಾನಿಸಿದೆ.

ಉದ್ಯೋಗಿನಿ ಯೋಜನೆಯಡಿ ನಿಗಮವು, ಬ್ಯಾಂಕ್ ಮೂಲಕ ಗರಿಷ್ಠ ಒಂದು ಲಕ್ಷದವರೆಗೆ ಸಹಾಯಧನ ಒದಗಿಸಲಿದ್ದು, ಕೌಟುಂಬಿಕ ವಾರ್ಷಿಕ ಅದಾಯ 40 ಸಾವಿರ ಮೀರಿರಬಾರದು. 18 ರಿಂದ 45 ವರ್ಷ ವಯೋಮಿತಿಯುಳ್ಳ ಎಲ್ಲಾ ವರ್ಗದ ಮಹಿಳೆಯರು, ಅರ್ಜಿ ಸಲ್ಲಿಸಬಹುದಾಗಿದೆ. ವಿಧವೆಯರು, ಅಂಗವಿಕಲರು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

ಜಿಲ್ಲೆಯ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 15 ರೊಳಗೆ ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಂ:5, 3ನೇ ಮಹಡಿ, ಪಿ.ಆರ್. ಪ್ಲಾಜಾ, ವಾಟಾಳ್ ನಾಗರಾಜ್ ರಸ್ತೆ, ಓಕಳೀಪುರಂ, ಬೆಂಗಳೂರು-21, ದೂರವಾಣಿ ಸಂಖ್ಯೆ:9242213527 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೋತ್ಸಾಹಧನಕ್ಕಾಗಿ ಯುವಕ ಸಂಘಗಳಿಂದ ಅರ್ಜಿ ಆಹ್ವಾನ

ಬೆಂಗಳೂರು, ಜೂನ್, 25: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಯುವ ನೀತಿ ಅನುಷ್ಟಾನ ಯೋಜನೆಯಡಿ ಪ್ರಸಕ್ತ ಸಾಲಿನ ನಮ್ಮೂರ ಶಾಲೆಗೆ ನಮ್ಮ ಯುವಜನರು ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೈಗೊಂಡಿರುವ ಚಟುವಟಿಕೆಗಳನ್ನು ಪರಿಗಣಿಸಿ ಯುವ/ಯುವತಿ/ಸಂಘ/ಸಂಸ್ಥೆಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾಹಿಸಿದೆ.

ನೋಂದಾವಣೆಗೊಂಡಿರುವ ಸಂಘ/ಸಂಸ್ಥೆಗಳು ತನ್ನ ಕಾರ್ಯವ್ಯಾಪ್ತಿಯಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಭೌತಿಕ ಹಾಗೂ ಬೌದ್ಧಿಕ ಚಟುವಟಿಕೆಗಳೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಸಂಸ್ಥೆಗಳನ್ನು ಗುರುತಿಸಿ, ಜಿಲ್ಲೆಯ ತಲಾ ಒಂದು ತಾಲ್ಲೂಕಿಗೆ ಒಂದು ಸಂಘ ಆಯ್ಕೆ ಮಾಡಿ ರೂ. 1 ಲಕ್ಷ ಪ್ರೋತ್ಸಾಹ ಧನ ನೀಡಲಿದೆ.

ಅರ್ಹ ಸಂಸ್ಥೆಗಳು ಜುಲೈ 2015 ರಿಂದ ಜೂನ್ 2016 ರವರೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ವರದಿಯನ್ನು ಸಊಕ್ತ ಪ್ರಸ್ತಾವನೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಕಂಠೀರವ ಕ್ರೀಡಾಂಗಣ, ಗೇಟ್ ನಂ. 12 ಕೊಠಡಿ ಸಂಖ್ಯೆ 17 ಮತ್ತು 18, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇಲ್ಲಿ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ದೂ.ಸಂ: 080-22239771 ಅಥವಾ ಮೊಬೈಲ್ ಸಂ: 9480886470 ಅನ್ನು ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಎಲ್.ದೇವಿಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರ.

ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು, ಜೂನ್, 10: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ 2016-17ನೇ ಸಾಲಿಗೆ ಸಾಲ ಸೌಲಭ್ಯ ಪಡೆಯಲಿಚ್ಛಿಸುವವರು ಅರ್ಜಿ ನಮೂನೆಗಳನ್ನು ಬೆಂಗಳೂರು ನಗರ ಜಿಲ್ಲೆಯ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಂಚವೃತ್ತಿ ಅಭಿವೃದ್ಧಿ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ, ಅರಿವು ಶೈಕ್ಷಣಿಕ ಸಾಲ ಯೋಜನೆ ಗಂಗಾ ಕಲ್ಯಾಣ ವೈಯಕ್ತಿಕ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಜೂನ್ 30, 2016 ರೊಳಗಾಗಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 18, 2016 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‍ಸೈಟ್ www.karnataka.gov.in/kvdcl ಸಂಪರ್ಕಿಸಬಹುದು.

ಉದ್ಯೋಗಿನಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು: ಜೂ 21. (ಕರ್ನಾಟಕ ವಾರ್ತೆ): ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲಿಚ್ಫಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಮಹಿಳೆಯರು ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳಿಂದ ಅರ್ಜಿ ಆಹ್ವಾನಿಸಿದೆ.

ಉದ್ಯೋಗಿನಿ ಯೋಜನೆಯಡಿ ನಿಗಮವು, ಬ್ಯಾಂಕ್ ಮೂಲಕ ಗರಿಷ್ಠ ಒಂದು ಲಕ್ಷದವರೆಗೆ ಸಹಾಯಧನ ಒದಗಿಸಲಿದ್ದು, ಕೌಟುಂಬಿಕ ವಾರ್ಷಿಕ ಅದಾಯ 40 ಸಾವಿರ ಮೀರಿರಬಾರದು. 18 ರಿಂದ 45 ವರ್ಷ ವಯೋಮಿತಿಯುಳ್ಳ ಎಲ್ಲಾ ವರ್ಗದ ಮಹಿಳೆಯರು, ಅರ್ಜಿ ಸಲ್ಲಿಸಬಹುದಾಗಿದೆ. ವಿಧವೆಯರು, ಅಂಗವಿಕಲರು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

ಜಿಲ್ಲೆಯ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 15 ರೊಳಗೆ ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಂ:5, 3ನೇ ಮಹಡಿ, ಪಿ.ಆರ್. ಪ್ಲಾಜಾ, ವಾಟಾಳ್ ನಾಗರಾಜ್ ರಸ್ತೆ, ಓಕಳೀಪುರಂ, ಬೆಂಗಳೂರು-21, ದೂರವಾಣಿ ಸಂಖ್ಯೆ:9242213527 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯುತ್ತಮ ಕ್ರೀಡಾ ಸಾಧನೆಗಳಿಗೆ 25 ಸಾವಿರ ಪ್ರೋತ್ಸಾಹಧನ

ಬೆಂಗಳೂರು ಜೂನ್ 27: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕ್ರೀಡಾ ಸಂಸ್ಕøತಿಯನ್ನು ಬೆಳಸಲು ಕ್ರೀಡಾ ಸಂಘಗಳ ಸ್ಥಾಪನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಗೊಂದು ಕ್ರೀಡಾ ಮತ್ತು ಸಂಘವನ್ನು ಸ್ಥಾಪಿಸಿ ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಪ್ರತಿಭೆಗಳನ್ನು ಗುರುತಿಸಲು ಯುವ ಸಬಲೀಕರಣ ಕ್ರೀಡಾ ಇಲಾಖೆಯು ಪ್ರೋತ್ಸಾಹಧನವಾಗಿ ಪ್ರತಿ ಹೋಬಳಿಗೆ ಒಂದು ಕ್ರೀಡಾ ಸಂಘಕ್ಕೆ ವಾರ್ಷಿಕ ತಲಾ 25 ಸಾವಿರ ನಗದು ಪ್ರೋತ್ಸಾಹ ಧನ ನೀಡಲಿದೆ.

ಅರ್ಹ ಹಾಗೂ ನೋಂದಾವಣೆಗೊಂಡಿರುವ ಕ್ರೀಡಾ/ಸಂಘ ಸಂಸ್ಥೆಗಳು ಕ್ರೀಡಾ ವರದಿಗಳನ್ನೊಳಗೊಂಡ, ಪೋಟೊ ಪ್ರತಿ ಸಮೇತ ನೋಂದಾವಣೆಯಾಗಿರುವ ಸಂಸ್ಥೆಗಳ ವಿವರಗಳೊಂದಿಗೆ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಕೋರಿದೆ.

ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು. ದೂರವಾಣೆ ಸಂಖ್ಯೆ: 08022239771, ಮೊಬೈಲ್ ಸಂಖ್ಯೆ: 9480886470 ಸಂಪರ್ಕಿಸಬಹುದು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಆನೆಲೈನ್‍ನಲ್ಲಿ ಜಮಾ

ಬೆಂಗಳೂರು ಜೂನ್ 27: ಹಿಂದುಳಿದ ವರ್ಗಗಳ ಇಳಾಖೆಯ ಮೂಲಕ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಆನ್ ಲೈನ್ ಮೂಲಕ ಬ್ಯಾಂಕ್ ಖಾತೆಗೆ ಮೂಡಲು ಉದ್ದೇಶಿಸಿದೆ.

ಹಿಂದುಳಿದ ವರ್ಗಗಳ ಪ್ರವರ್ಗ=1 ವಿದ್ಯಾರ್ಥಿಗಳಿಗೆ ರೂ.1 ಲಕ್ಷ ಹಾಗೂ ಪ್ರವರ್ಗ-2ಎ,3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ 44,500/-ರೂ. ನಿಗದಿಪಡಿಸಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕೂಡಲೇ ವಿದ್ಯಾರ್ಥಿ ಮತ್ತು ತಾಯಿಯ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರದು ಬ್ಯಾಂಕ್ ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆ, ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, ಹೊಂದಿದಲ್ಲಿ ಜೆರಾಕ್ಸ್ ಪ್ರತಿಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಬೇಕು.

ಶಾಲಾ ಮುಖ್ಯೋಪಾಧ್ಯಾಯರುಗಳು ಹಿಂದೂಲಿದ ವರ್ಗಗಳ ಇಲಾಖೆಯಿಂದ ನೀಡಲಾಗಿರುವ ವಿವರಗಳನ್ನು ಭರ್ತಿ ಮಾಡಿ ವಿಧ್ಯಾರ್ಥಿಗಳಿಂದ ಪಡೆದ ಬ್ಯಾಂಕ್ ಪುಸ್ತಕದ ಪ್ರತಿ, ಜಾತಿ ಮತ್ತು ಆಧಾರ ಪ್ರತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಲು ಕೋರಿದೆ.

ಪ್ರೋತ್ಸಾಹಧನಕ್ಕಾಗಿ ಯುವಕ ಸಂಘಗಳಿಂದ ಅರ್ಜಿ ಆಹ್ವಾನಬೆಂಗಳೂರು, ಜೂನ್, 25: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಯುವ ನೀತಿ ಅನುಷ್ಟಾನ ಯೋಜನೆಯಡಿ ಪ್ರಸಕ್ತ ಸಾಲಿನ ನಮ್ಮೂರ ಶಾಲೆಗೆ ನಮ್ಮ ಯುವಜನರು ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೈಗೊಂಡಿರುವ ಚಟುವಟಿಕೆಗಳನ್ನು ಪರಿಗಣಿಸಿ ಯುವ/ಯುವತಿ/ಸಂಘ/ಸಂಸ್ಥೆಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾಹಿಸಿದೆ.ನೋಂದಾವಣೆಗೊಂಡಿರುವ ಸಂಘ/ಸಂಸ್ಥೆಗಳು ತನ್ನ ಕಾರ್ಯವ್ಯಾಪ್ತಿಯಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಭೌತಿಕ ಹಾಗೂ ಬೌದ್ಧಿಕ ಚಟುವಟಿಕೆಗಳೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಸಂಸ್ಥೆಗಳನ್ನು ಗುರುತಿಸಿ, ಜಿಲ್ಲೆಯ ತಲಾ ಒಂದು ತಾಲ್ಲೂಕಿಗೆ ಒಂದು ಸಂಘ ಆಯ್ಕೆ ಮಾಡಿ ರೂ. 1 ಲಕ್ಷ ಪ್ರೋತ್ಸಾಹ ಧನ ನೀಡಲಿದೆ.ಅರ್ಹ ಸಂಸ್ಥೆಗಳು ಜುಲೈ 2015 ರಿಂದ ಜೂನ್ 2016 ರವರೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ವರದಿಯನ್ನು ಸಊಕ್ತ ಪ್ರಸ್ತಾವನೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಕಂಠೀರವ ಕ್ರೀಡಾಂಗಣ, ಗೇಟ್ ನಂ. 12 ಕೊಠಡಿ ಸಂಖ್ಯೆ 17 ಮತ್ತು 18, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇಲ್ಲಿ ಪಡೆಯಬಹುದು.ಹೆಚ್ಚಿನ ವಿವರಗಳಿಗೆ ದೂ.ಸಂ: 080-22239771 ಅಥವಾ ಮೊಬೈಲ್ ಸಂ: 9480886470 ಅನ್ನು ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಎಲ್.ದೇವಿಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರ.

ಸಚಿವ ಸಂಪುಟ

SI.No.NameCabinet RankTelephone No.Photo
1SHRI SIDDARAMAIAH
Chief Minister
1. Department of Cabinet Affairs2. Department of Personnel and Administrative Reforms3. Department of Finance including Institutional Finance and Small Savings & Lotteries4. Intelligence Wing from Home Department5.Housing Department.6.Information & Public Relations from Kannada Culture, Information and Public Relation Department.7. Any other Department not specifically allocated.22253414 -32612225342422253524222534542220020422253769(22257897)(22252297)
2.Dr. G. PARAMESHWARAHome Department excluding Intelligence Wing22286778-5076
3.SHRI R.V.DESHPANDE1. Large and Medium Scale Industries from Commerce and Industries.2. Infrastructure Development Department.22250637-344823335988
4.SHRI RAMALINGA REDDYTransport Department.22371240-4010
(22237240)
5.SHRI T.B.JAYACHANDRA1. Law, Justice and Human Rights from Law Department2. Parliamentary Affairs and Legislation3.Minor Irrigation from Water Resource Department.22254661-3439222205779
22205779
22258472
6.SHRI B. RAMANATHA RAIForest, Ecology and Environment Department.22255023
(22255801)
7.SHRI H.K. PATILRural Development and Panchayat Raj Development.22258094-3492
22208642
8.DR. H.C. MAHADEVAPPAPublic Works, Ports and Inland Transport Department.22258489-3405
(23511655)
9.SHRI K.J. GEORGEAll subjects pertaining to Bangalore City, including BBMP, BDA, BWSSB, BMRDA, Directorate of Town Planning from Urban Development Department.22251798-3489
(22252297)
(40406508)
10.SHRI H.S. MAHADEVA PRASAD1. Co-operation Department excluding Agriculture Marketing.2. Sugar from Commerce and Industries Department.22251176-3719
(22262599)
11.SHRI U.T. KHADERFood and Civil Supplies and Consumer Affairs Department.22383418-4783
(23632782)
12.SHRI M.B. PATILMajor and Medium Irrigation from Water Resources Department.22251568-3426
(23611924)
13.SHRI H. ANJANEYA1. Social Welfare Department.2. Backward Classes Welfare Department.22353104
(23332307)
14.SHRI D.K. SHIVAKUMAREnergy Department. 22258004-3496
(23600560)
15.SHRI R. ROSHAN BAIG1.City Corporations excluding BBMP and subjects pertaining to Bangalore City, Urban Development Authorities excluding subjects pertaining to Bangalore, Directorate of Urban Land Transport, KUWS&DB and KUIDFC from Urban Development Department2. Haj from Minority Welfare and Wakf Department. 22252292-4264
(25360009)
(25360050)
16.SMT UMASHREE1. Women and Child Development and Empowerment of Differently Abled and Senior Citizens Department.2. Kannada and Culture from Kannada and Culture, Information Department.22255282-3469
17.SHRI KRISHNA BYRE GOWDAAgriculture Department.222256093-4439
18.DR. SHARANAPRAKASH RUDRAPPA PATILMedical Education from Health and Family Welfare Department.22253747-3273
(23439744)
19.SHRI TANVEER SAIT1. Primary and Secondary from Education from Education Department2. Minority Welfare and Wakf Department excluding Haj22267889-4583 
20.SHRI S.S. MALLIKARJUNA1. Horticulture Department excluding Sericulture.2. Agricultural Marketing from Co-operation Department.  
21.SHRI K.R RAMESH KUMARHealth and Family Welfare excluding Medical Education  
22.SHRI KAGODU THIMMAPPARevenue Department excluding Muzrai.  
23.SHRI JARAKIHOLI RAMESH LAXMANRAOSmall Scale Industries from Commerce and Industries Department.  
24.SHRI M.R. SEETHARAM1.Planning and Statistics Department.
2. Science & Technology from IT & BT, Science and Technology Department
  
25.SHRI SANTHOSH S. LADLabour Department.  
26.SHRI BASAVARAJ RAYAREDDIHigher Education from Education Department  
27.SHRI METI HULLAPPA YAMANAPPAExcise from Finance Department  

Minister of State (Independent Charge)

SI.No.NameCabinet RankTelephone No.Photo
28.SHRI VINAY R. KULKARNIMines and Geology from Commerce and Industries Department.22352152-5006
29.SHRI A. MANJU1. Animal Husbandry from Animal Husbandry and Fisheries Department.2. Sericulture from Horticulture Department22251772 
30.SHRI PRIYANKA KHARGEInformation Technology and Bio-Technology form IT & BT, Science and Technology Department2. Tourism Department  
31.SHRI RUDRAPPA MANAPPA LAMANI1. Textiles from Commerce and Industries Department.2. Muzrai from Revenue Department.  
32.SHRI ESHWARA B. KHANDRE1. Municipalities and Local Bodies (CMCs, TMC & TPs) from Urban Depvelopment Department.2. Department of Public Enterprises.  
33.SHRI PROMOD MADHWARAJ1. Youth Services Department.2. Fisheries from Animal Husbandry, and Fisheries Department.  

ಇಲಾಖಾ ಪರೀಕ್ಷೆ – ಪ್ರವೇಶ ಪತ್ರ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯ

ಬೆಂಗಳೂರು,  ಅಗಸ್ಟ್  3 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕಸೇವಾ ಆಯೋಗವು 2013ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಆಗಸ್ಟ್ 10 ರಿಂದ 22 ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮತ್ತು ಆಗಸ್ಟ್ 26 ರಿಂದ 31 ರವರೆಗೆ ಬೆಂಗಳೂರು ಕೇಂದ್ರದಲ್ಲಿ  ನಡೆsಸಲಿದ್ದು,  ಈ ಪರೀಕ್ಷೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.  ಅಭ್ಯರ್ಥಿಗಳು ಅಗಸ್ಟ್ 1 ರಿಂದ ಆಯೋಗದ ವೆಬ್‌ಸೈಟ್  www.kpsc.kar.nic.in ನ Home page ನಲ್ಲಿ  “Click here to download admission ticket for Departmental Examination 2013-I Session” ಅನ್ನು ಕ್ಲಿಕ್ ಮಾಡಿ ತಮ್ಮ ಅರ್ಜಿ ಸಂಖ್ಯೆಗಳನ್ನು ನಮೂದಿಸಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.  ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ಸಮಸ್ಯೆ ಉದ್ಫವವಾದಲ್ಲಿ ಆಯೋಗದ ಸಹಾಯವಾಣಿ ಸಂಖ್ಯೆ 30574944/30574945 ಅನ್ನು ಸಂಪರ್ಕಿಸಲು ಕೋರಿದೆ.