ಹಾಲುಮತ ಮಹಾಸಭಾ (ರಿ.)

ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ……..
ಶ್ರೀಕ್ಷೇತ್ರ ಕಾಗಿನೆಲೆ
ಗೌರವಾಧ್ಯಕ್ಷರು : ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಶ್ರೀಕ್ಷೇತ್ರ ಕಾಗಿನೆಲೆ.

ರಾಜಕೀಯ ಭಿನ್ನಾಭಿಪ್ರಾಯಗಳಿಂದ ಕುರುಬ ಸಮಾಜದ ಹಿರಿಯರಾದ ವಿಶ್ವನಾಥ್‍ರವರು ಮತ್ತು
ಸಿದ್ದರಾಮಯ್ಯನವರ ಮುಸುಕಿನ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮಾಜ.

ಭಾರತ ದೇಶದಲ್ಲಿ 14 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಕುರುಬ
ಸಮಾಜ ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲೂ ವಿಸ್ತಾರವಾಗಿ ಹರಡಿಕೊಂಡಿರುವ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ,
ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಯನ್ನು ಹೊಂದಿಲ್ಲದೇ ಇರುವುದು ದುರಂತ. ಇಂತಹ ಸ್ಥಿತಿಯಲ್ಲಿ ಕುರುಬರು
ಜೀವಿಸುತ್ತಿರುವಾಗ, ಸಿದ್ದರಾಮಯ್ಯನವರು ರಾಜ್ಯ ಮುಖ್ಯಮಂತ್ರಿಯಾಗಿದ್ದರು ಎಂಬುದು ಹೆಮ್ಮೆ ತರುವಂತದ್ದು. ಹೆಚ್. ವಿಶ್ವನಾಥ
ರವರ ಕೊಡುಗೆಯೂ ಸಮಾಜಕ್ಕೆ ಅಪಾರವಾದುದು. ಕಾಗಿನೆಲೆಯಲ್ಲಿ ಕನಕ ಗುರುಪೀಠ ಸ್ಥಾಪನೆ ಮಾಡುವಲ್ಲಿ ಸಂಸ್ಥಾಪನಾ
ಅಧ್ಯಕ್ಷರಾಗಿ ಹಿರಿಯಣ್ಣನ ಸ್ಥಾನದಲ್ಲಿ ನಿಂತಿದ್ದರು. ಸಮಾಜದಲ್ಲಿ ಇರುವ ಬೆರಳಣಿಕೆಯಷ್ಟು ರಾಜಕೀಯ ಮುಖಂಡರÀ ಏಳಿಗೆಯನ್ನು
ಕುರುಬ ಸಮಾಜವು ಬಯಸುತ್ತಿದೆ. ಆದರೆ ರಾಜಕೀಯ ವಿಷಯಗಳಿಗೆ ಸಂಬಂಧಪಟ್ಟಂತೆ ವೈಯಕ್ತಿಕ ಭಿನ್ನಾಭಿಪ್ರಾಯಗಳು
ಬಹಿರಂಗವಾಗಿ ಹೇಳಿಕೆ ನೀಡುತ್ತಿ ರುವುದು. ಕುಗ್ಗಿರುವ ಸಮಾಜವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಲಾಗುತ್ತಿದೆ.

ಕನಕ ಗುರುಪೀಠದ ಸಂಸ್ಥಾಪಕರಾದ ಹೆಚ್. ವಿಶ್ವನಾಥರವರು ಮಠದಲ್ಲಿ ಜಗದ್ಗುರುಗಳ ಜೊತೆ ಚರ್ಚೆ ನಡೆಸಬಹುದಿತ್ತು.
ಕಾಂಗ್ರೇಸ್ ಪಕ್ಷಕ್ಕೆ ಸಿದ್ದರಾಮಯ್ಯನವರು ಬಂದಾಗ ಆಹ್ವಾನಿಸಿದ್ದು ಹೆಚ್. ವಿಶ್ವನಾಥರು, ಆನಂತರ ರಾಜಕೀಯದಲ್ಲಿ ಉಂಟಾದ
ಭಿನ್ನಾಭಿಪ್ರಾಯಗಳಿಗೆ ಕನಕ ಗುರುಪೀಠದ ಜಗದ್ಗುರುಗಳು ಹೊಣೆ ಹೇಗಾಗುತ್ತಾರೆ. ಜಗದ್ಗುರುಗಳು ಕುರುಬ ಸಮಾಜದ ಜಾಗೃತಿಗೆ,
ಸಂಘಟನೆಗಾಗಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಕುರುಬ ಸಮಾಜದಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿ
ಗಳಾಗಿದ್ದರೂ ಎಂಬ ಹೆಮ್ಮೆ ಎಂಬುದನ್ನು ಬಿಟ್ಟರೆ ಕುರುಬ ಸಮಾಜಕ್ಕೆ ನಿರೀಕ್ಷೆ ಮಟ್ಟದಲ್ಲಿ ಅನುದಾನಗಳು ಬಿಡುಗಡೆಯಾಗಿಲ್ಲ.
“ಸರ್ವರಿಗೂ ಸಮಪಾಲು ಸಮಬಾಳು” ಎಂಬ ಘೋಷಣೆಯಲ್ಲಿ ಅನ್ಯ ಸಮಾಜದ ಕಡೆ ಗಮನ ಹರಿಸಿದ ಸರ್ಕಾರಕ್ಕೆ ಕುರುಬರು
ವಿಶೇಷವಾಗಿ ಕಂಡಿಲ್ಲ. ಸಮಾಜದ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾಗ, ಸಮಾಜದ ಗುರುಪೀಠ ಅವರ ಪರವಾಗಿ
ನಿಲ್ಲುವುದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯನವರ ಸ್ಥಾನದಲ್ಲಿ ಹೆಚ್. ವಿಶ್ವನಾಥರವರು ಇದ್ದರೂ ಅವರ ಪರವಾಗಿಯೇ
ಧ್ವನಿಯಾಗುತ್ತಿದ್ದರು.

ಸಮಾಜದ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಜಗದ್ಗುರುಗಳು ಹೇಳಿಕೆ ನೀಡಿರುವುದನ್ನು ಮಾಧ್ಯಮಗಳು
ವೈಭವೀಕರಿಸುತ್ತಿವೆ. ಜಗದ್ಗುರುಗಳು ಗೆದ್ದೆತ್ತಿನ ಬಾಲ ಹಿಡಿಯುವುದೇ ಆಗಿದ್ದಿದ್ದರೆ. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಲ್ಲ.
ಆಡಳಿತ ನಡೆಸುತ್ತಿರುವುದು ಹೆಚ್. ವಿಶ್ವನಾಥರವರು ಪ್ರತಿನಿಧಿಸುತ್ತಿರುವ ಜೆಡಿಎಸ್ ಪಕ್ಷ.

ಸಮಾಜ ಯುವಶಕ್ತಿ ಜಾಗೃತವಾಗುತ್ತಿದೆ. ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶದಲ್ಲಿ
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಸದೃಢರಾಗಲು ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ತರಲಾಗುತ್ತಿವೆ.
ರಾಜಕೀಯದ ಭಿನ್ನಾಭಿಪ್ರಾಯಗಳಿಗೆ ಕುರುಬ ಸಮಾಜವನ್ನು, ಸಮಾಜದ ಸ್ವಾಭಿಮಾನದ ಸಂಕೇತವಾಗಿರುವ ಶ್ರೀ ಕನಕ
ಗುರುಪೀಠವನ್ನು ಜಗದ್ಗುರುಗಳನ್ನು ಹೊಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿಂದ
ಸಮಾಜದಲ್ಲಿ ಒಡಕು ಉಂಟಾಗುತ್ತದೆ. ಕುರುಬ ಸಮಾಜ ಸಂಘಟನೆಯಾಗಲು ಹೆಚ್. ವಿಶ್ವನಾಥರವರ ಮಾರ್ಗದರ್ಶನವೂ
ಅತ್ಯಗತ್ಯವಾಗಿದೆ. ಈ ರೀತಿಯ ಅಸಮಾಧಾನದ ಬಹಿರಂಗ ಹೇಳಿಕೆಗಳು ಸಮಾಜದಒಗ್ಗಟ್ಟಿನಲ್ಲಿ ಒಡಕು ಮೂಡಿಸುವಂತದ್ದು.
ದೇಶದಲ್ಲಿ 14 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಸಮಾಜವನ್ನು ಒಗ್ಗೂಡಿಸಿ ಎರಡನೇ ಹಂತದ ನಾಯಕರನ್ನು ಬೆಳೆಸುವ
ರಾಜಕೀಯ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಿಡಿತ ಸಾಧಿಸುವತ್ತ ಪ್ರಯತ್ನಗಳಾಗಲಿ ಎಂದು ಸಮಸ್ತ ಕುರುಬ ಸಮಾಜದ
ಪರವಾಗಿ ಹಾಲುಮತ ಮಹಾಸಭಾ ಈ ಮೂಲಕ ರಾಜಕೀಯ ಮುಖಂಡರಿಗೆ ವಿನಂತಿ ಮಾಡಿಕೊಳ್ಳುತ್ತಿದೆ.

ರುದ್ರಣ್ಣ ಗುಳಗುಳಿ, ಗದಗ
ರಾಜ್ಯಾಧ್ಯಕ್ಷರು ಹಾಲುಮತ ಮಹಾಸಭಾ (ರಿ)
ಒob. : 9900256602
ರಾಜು ಮೌರ್ಯ ದಾವಣಗೆರೆÀ
ರಾಜ್ಯ ಸಂಚಾಲಕರು ಹಾಲುಮತ ಮಹಾಸಭಾ (ರಿ)
ಒob. : 9535630196