ಕಟ್ಟಡ ಕಾರ್ಮಿಕರ ಅಭದ್ರತೆಯನ್ನು ಕಂಡ ಸರ್ಕಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗಿ, ಈ ಮೂಲಕ ಹಲವು ಸೌಲಭ್ಯಗಳನ್ನು ಪಡೆಯಬಹುದು*

*ಸಿಗುವ ಸೌಲಭ್ಯಗಳು*

*1 ಪಿಂಚಣಿ ಯೋಜನೆ*
3 ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ 1000

*2 ದುರ್ಬಲತೆ ಪಿಂಚಣಿ*
ಫಲಾನುಭವಿಗೆ ಕಾಯಿಲೆಗಳಿಂದ ಹಾಗೂ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.1,000 ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2 ಲಕ್ಷದವರೆಗೆ ಸಹಾಯಧನ.
*3 ಉಪಕರಣಗಳ ಖರೀದಿಗೆ* ಧನಸಹಾಯ ರೂ. 20,000 ಸಾವಿರ ದವರೆಗೆ
*4 ಮನೆ ಖರೀದಿ ಅಥವಾ ಕಟ್ಟಲು* ಸಹಾಯಧನ
ರೂ 2,00,000 ರವರೆಗೆ.
*5 ಹೆರಿಗೆ ಸೌಲಭ್ಯ*
ಮಹಿಳಾ ಫಲಾನುಭವಿಗೆ ಮೊದಲ ಎರಡು
ಹೆಣ್ಣು ಮಗುವಿನ ಜನನಕ್ಕೆ 30,000 ಗಂಡು ಮಗುವಿನ ಹೆರಿಗೆಗಳಿಗೆ ತಲಾ ರೂ.15 ಸಾವಿರ

*6 ಅಂತ್ಯಕ್ರಿಯೆ ವೆಚ್ಚ*
ರೂ.4ಸಾವಿರ ಹಾಗೂ ಎಕ್ಸ್​ಗ್ರೇಷಿಯಾ ರೂ.50ಸಾವಿರ ಧನಸಹಾಯ.
*7 ವಿಧ್ಯಾರ್ಥಿ ವೇತನ*
ಕಾರ್ಮಿಕರ ಎರಡು ಮಕ್ಕಳಿಗೆ
ಮತ್ತು ಪ್ರತಿಬಾವಂತ ವಿಧ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ
*8 ವೈದ್ಯಕೀಯ ಧನಸಹಾಯ*
ರೂ.300ರಿಂದ ರೂ.10,000 ರವರೆಗೆ.

*9 ಅಪಘಾತ ಪರಿಹಾರ*
ಮರಣ ಹೊಂದಿದಲ್ಲಿ 5,00,000.
ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ 2,00,000 ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ಅಂಗವಿಕಲತೆಯ ಪ್ರಮಾಣದ ಶೇಕಡಾವಾರು ಆಧಾರದ ಮೇಲೆ ಪರಿಹಾರ.
*10 ಪ್ರಮುಖ ವೈದ್ಯಕೀಯ ವೆಚ್ಚ ಧನಸಹಾಯ*
ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್, ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್, ಅನ್ನನಾಳದ ಚಿಕಿತ್ಸೆ, ಡಯಾಲಿಸಿಸ್, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ಮಿದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಹರ್ನಿಯಾ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್​ಲೋಕೇಶನ್ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ 2,00,000 ರೂ.ವರೆಗೆ (ಸಿ.ಜಿ.ಹೆಚ್.ಎಸ್ ದರಗಳಿಗೆ ಒಳಪಟ್ಟು)
*11 ಮದುವೆ ಧನಸಹಾಯ*
ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.50 ಸಾವಿರ

*12 ಅನಿಲ ಭಾಗ್ಯ*
ಅನಿಲ ಸಂಪರ್ಕ ದೊಂದಿಗೆ ಎರಡು ಬರ್ನರ್ ಸ್ಟೌವ್ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಸಿಲಿಂಡರ್ ರೀಫಿಲ್

*13 KSRTC ಬಸ್ ಪಾಸ್ ಸೌಲಭ್ಯ*
ರಾಜ್ಯಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ಕಾರ್ಮಿಕರ ಎರಡು ವಿಧ್ಯಾರ್ಥಿಗಳಿಗೆ
📝 ಬೇಕಾಗುವ ದಾಖಲೆಗಳು

💠ನಮೂನೆ -5ರಲ್ಲಿ ಅರ್ಜಿ
💠ನಮೂನೆ 6 ರಲ್ಲಿ ನಾಮ ನಿರ್ದೇಶನ ಅರ್ಜಿ
💠ಮೂರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
💠ಉದ್ಯೋಗದ ದೃಢೀಕರಣ ಪತ್ರ.
💠ಆಧಾರ್​ಕಾರ್ಡ್
💠 ವಯಸ್ಸಿನ ದೃಢೀಕರಣ ಪತ್ರ.
🔎**

*

ಹಿದಾ