*ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳು*

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆಯ ವತಿಯಿಂದ ಅನುಷ್ಠಾನಗೊಳ್ಳಲಿರುವ ಯೋಜನೆಗಳ ವಿವರ

*1. ಸ್ವಯಂ ಉದ್ಯೋಗ ಯೋಜನೆ*
ಮತೀಯ ಅಲ್ಪಸಂಖ್ಯಾತ ವರ್ಗದವರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖರು ಬೌದ್ಧ ಜನಾಂಗದವರು ಕೈಗೊಳ್ಳುವ ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಭಿತ ಚಟುವಟಿಕೆಗಳು ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್/ಹಣಕಾಸು ಸಂಸ್ಥೆಗಳ ಸಹಯೋಗದಿಂದ ಗರಿಷ್ಠ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ಒದಗಿಸುವುದು. ಘಟಕ ವೆಚ್ಚ 5 ಲಕ್ಷದವರೆಗೆ ನಿಗಮದಿಂದ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ. 2 ಲಕ್ಷದ ಧನ ಸಹಾಯ ಹಾಗೂ ಘಟಕ ವೆಚ್ಚದ 1ಲಕ್ಷದ ಒಳಗೆ ಇರುವ ಚಟುವಟಿಕೆಗಳಿಗೆ ಶೇ 50% ಅಥವಾ ಗರಿಷ್ಠ ಮಿತಿ 35 ಸಾವಿರ ಸಹಾಯಧನ ಮಂಜೂರು ಮಾಡುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ ಭರಿಸುವುದು.
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81 ಸಾವಿರ, ನಗರ ಪ್ರದೇಶದವರಿಗೆ ರೂಒಂದು ಲಕ್ಷದ ಮೂರು ಸಾವಿರ ರೂ. ಗಳ ಒಳಗಿರಬೇಕು.
2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಕೊಟೇಶನ್ ಅಥವಾ ಯೋಜನಾ ವರದಿ ಮತ್ತು ಲೈಸೆನ್ಸ್.
4. ಅರ್ಜಿದಾರರ ಅಥವಾ ಜಮೀನುದಾರರ ತಲಾ ಮೂರು ಭಾವಚಿತ್ರ.
5. ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು
6. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳು.

*2) ಶ್ರಮಶಕ್ತಿ ಯೋಜನೆ*
ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಡುಬಡವರು ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ವೃತ್ತಿ ಕುಲಕಸುಬುದಾರರು ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿ ಕೌಶಲತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ಆದಾಯ ಹೆಚ್ಚಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ “ಶ್ರಮಶಕ್ತಿ” ಯೋಜನೆಯಡಿಯಲ್ಲಿ ಸಾಲಸೌಲಭ್ಯ ನೀಡಲಾಗುವುದು ಹಾಗೂ ಸಾಂಪ್ರದಾಯಿಕ ವೃತ್ತಿ ಕುಲಕಸುಬುಗಳಾದ ಅಟೋ ಮೊಬೈಲ್ ರಿಪೇರಿ ಮತ್ತು ಸರ್ವಿಸಿಂಗ್, ಗ್ಯಾಸ್ ಹಾಗೂ ಆರ್ಕ್ ವೆಲ್ಡಿಂಗ್, ಬೆಡ್ ಮೇಕಿಂಗ್, ವಲ್ಕನೈಸಿಂಗ್, ಮರದ ಕೆತ್ತನೆ ಕೆಲಸ. ಬಡಗಿ, ಟೈಲರಿಂಗ್, ಬಟ್ಟೆ ಮೇಲೆ ಬಣ್ಣಗಾರಿಕೆ ಮತ್ತು ಮುದ್ರಣಗಾರಿಕೆ, ಬೆತ್ತದ ಕೆಲಸ, ಮರದ ಆಟಿಕೆ ತಯಾರಿಕೆ, ಮಂಡಕ್ಕೆ ಬಟ್ಟಿ, ಅವಲಕ್ಕಿ ಬಟ್ಟಿ, ಬಿದರಿ ವರ್ಕ್, ಕುಮ್ಮಾರಿಕೆ, ಎಲೆಕ್ಟ್ರಿಕಲ್ ವೈರಿಂಗ್ ಹಾಗೂ ರೀವೈಂಡಿಂಗ್ ಆಫ್ ಮೋಟಾರ್ಸ್, ಮೀನುಗಾರಿಕೆ ಸಲಕರಣೆ ಖರೀದಿ, ಹ್ಯಾಂಡಿಕ್ರಾಫ್ಟ್, ಹೈ ನು ಗಾರಿಕೆ, ಕಲ್ಲು ಕೆತ್ತನೆ ಕೆಲಸ, ಪಾತ್ರೆ ತಯಾರಿಕೆ, ಕಲಾಯಿ ಕೆಲಸ, ಸುಣ್ಣದಕಲ್ಲು ಸುಡುವಿಕೆ, ಗಾಜಿನ ಅಲಂಕಾರಿಕ ವಸ್ತು ತಾಯಾರಿಕೆ. ಅಡಿಕೆ ತಟ್ಟೆ, ಕಾಗದ ತಟ್ಟೆ ತಯಾರಿಕೆ, ಕಿರಾಣಿ ಅಂಗಡಿ, ಫಾಸ್ಟ್ ಫುಡ್ ಸೆಂಟರ್, ಬೇಕರಿ ಮತ್ತು ಕಾಂಡಿಮೆಂಟ್ಸ್, ತಂಪು ಪಾನೀಯ, ಕಬ್ಬಿನ ರಸ, ರೇಷ್ಮೆ/ಹತ್ತಿ ನೇಕಾರಿಕೆ, ಏಲಕ್ಕಿ ಹಾರ ತಯಾರಿಕೆ, ಮೇಣದ ಬತ್ತಿ ತಯಾರಿಕೆ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಪೊರಕೆ ತಯಾರಿಕೆ, ಬ್ಯೂಟಿ ಪಾರ್ಲರ್, ಎಲೆಕ್ಟ್ರಿಕಲ್ ಲಾಂಡ್ರಿ, ಎಸಿ/ ಫ್ರಿಡ್ಜ್ ರಿಪೇರಿ, ಜರ್ಡೋಸಿ/ ಎಂಬ್ರಾಯಿಡರಿ, ಫೊಟೋ ಫ್ರೇಮಿಂಗ್ ಮುಂತಾದ ಅವಶ್ಯಕವಾದ ಯಂತ್ರೋಪಕರಣ/ ಸಲಕರಣೆಗಳು ಹಾಗೂ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಲು 50 ಸಾವಿರದವರೆಗೆ ಸಾಲ/ ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕ ವೆಚ್ಚ ರೂ. 50 ಸಾವಿರ ದ ಸಾಲದ ಮಂಜೂರಾತಿಯು ಸಾಂಪ್ರದಾಯಿಕ ಪರಂಪರಾಗತ ಕುಶಲಕರ್ಮಿಗಳು/ ವೃತ್ತಿ ಕುಲಕಸುಬುದಾರರಿಗೆ ಅನ್ವಯವಾಗುತ್ತದೆ. ಇತರ ವೃತ್ತಿಗಳಿಗೆ ಯೋಜನೆಯ ಲಾಭದಾಯಕತೆ ಮತ್ತು ಆದಾಯಗಳಿಗೆ ಅನುಗುಣವಾಗಿ ರೂ.25 ಸಾವಿರಕ್ಕೆ ಮೀರದಂತೆ ಸಾಲವನ್ನು ಮಂಜೂರು ಮಾಡಲಾಗುವುದು. ಈ ಸಾಲಕ್ಕೆ ಶೇ. 50 ರಷ್ಟು ಸಹಾಯಧನವನ್ನು ಬ್ಯಾಕ್ ಆಂಡ್ ಸಬ್ಸಿಡಿಯಾಗಿ ಪರಿಗಣಿಸಲಾಗುವುದು. ನಿಗಮದಿಂದ ಬಿಡುಗಡೆ ಮಾಡಿದ ಸಾಲಕ್ಕೆ ಶೇ. 4ರ ಬಡ್ಡಿ ದರದಲ್ಲಿ ಮರುಪಾವತಿ ಪಡೆಯಲಾಗುತ್ತದೆ. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಸಾಲ ಮಂಜೂರು ಮಾಡಲಾಗುವುದು.
ಬೇಕಾಗುವ ದಾಖಲಾತಿಗಳು:
1. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81 ಸಾವಿರ ಹಾಗೂ ನಗರ ಪ್ರದೇಶದವರಿಗೆ ಒಂದು ಲಕ್ಷದ ಮೂರು ಸಾವಿರದ ಒಳಗಿರಬೇಕು.
2. ಅರ್ಜಿದಾರರ ಹಾಗೂ ಜಾಮೀನುದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಕೊಟೇಶನ್ ಅಥವಾ ಯೋಜನಾ ವರದಿ ಮತ್ತು ಲೈಸೆನ್ಸ್ ಅಥವಾ ಆಧಾರ್ ಕಾರ್ಡ್ ಝೆರಾಕ್ಸ್.
4. ಅರ್ಜಿದಾರರ ಮತ್ತು ಜಮೀನುದಾರರ ತಲಾ ಮೂರು ಭಾವಚಿತ್ರಗಳು.
5. ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು
6. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳು.

*3) ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ:*
ಈ ಯೊಜನೆಯಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂಸಿ.ಎ, ಎಂ.ಟೆಕ್, ಪಿ.ಹೆಚ್.ಡಿ, ಎಂ.ಇ, ಎಂ.ಎಸ್ (ಡಿಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೊಮೊ, ನರ್ಸಿಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ, ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್, ಮಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಿಕಲ್ ಮ್ಯಾನೆಜ್ಮೆಂಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ. 10 ಸಾವಿರ ದಿಂದ ರೂ. 75 ಸಾವಿರದವರೆಗೆ ವಿವಿಧ ವ್ಯಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಯು.ಎಂ.ಎಸ್ ಹಾಗೂ ಬಿ.ಎ.ಎಂ.ಎಸ್ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿದ ಶುಲ್ಕದಂತೆ ಸಾಲ ಬಿಡುಗಡೆ ಮಾಡಲಾಗುವುದು. ಇದಕ್ಕೆ ವಾರ್ಷಿಕವಾಗಿ ಶೇಕಡಾ 2 ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಫಲಾನುಭವಿಯ ನಿಗಮಕ್ಕೆ ಮರುಪಾವತಿಯನ್ನು ಮಾಡಬೇಕಾಗಿದೆ.
“ಅರಿವು” (CET) ಯೋಜನೆ:
ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯು ರ್ಯಾಂಕಿಂಗ್ ಪಡೆದು ವೃತ್ತಿಪರ ಶಿಕ್ಷಣಕ್ಕೆ ಸೀಟನ್ನು ಆಯ್ಕೆ ಮಾಡಿಕೊಂಡ ಕೂಡಲೇ ನಿಗಮವು ಅಂತಹಾ ವಿದ್ಯಾರ್ಥಿಗೆ ಮುಂಚಿತವಾಗಿ ಸಾಲವನ್ನು ಮಂಜೂರು ಮಾಡುತ್ತದೆ. ಅಂತಹಾ ವಿದ್ಯಾರ್ಥಿಯು ಸಂಬಂಧ ಪಟ್ಟ ಕಾಲೇಜಿಗೆ ಪಾವತಿಸಬೇಕಾದ ಬೋಧನ ಶುಲ್ಕವನ್ನು ನಿಗಮವು ನೇರವಾಗಿ KEA ಮೂಲಕ ಪಾವತಿಸುತ್ತದೆ.
“ಅರಿವು” (NEET) ಯೋಜನೆ:
ವೈದಕೀಯ ಮತ್ತು ದಂತ ವೈದಕೀಯ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು NEET ಪರೀಕ್ಷೆಗೆ ಹಾಜರಾದಲ್ಲಿ ಅವರ ಬೋಧನಾ ಶುಲ್ಕದ ಸರಕಾರಿ ಸೀಟ್ ನ ಶೇ. 100ರಷ್ಟು ಅಥವಾ ಖಾಸಗೀ ಸೀಟ್ ಶೇ.50ರಷ್ಟು ಸಾಲವನ್ನು ಮಂಜೂರು ಮಾಡಲಾಗುತ್ತದೆ.
ಮೇಲ್ಕಂಡ ಅರಿವು ಯೋಜನೆ, “ಅರಿವು” (CET) ಯೋಜನೆ, ಅರಿವು (NEET) ಯೋಜನೆಯಲ್ಲಿ ಪ್ರಥಮ ಬಾರಿ (Fresh) ಸಾಲ ಪಡೆಯ ಬಯಸುವ ಅಭ್ಯರ್ಥಿಗಳು www.kmdc.kar.nic.in/arivu2 ಇದಕ್ಕೆ ಲಾಗಿನ್ ಮಾಡಿ ಕೊಳ್ಳಬೇಕು ಮತ್ತು ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯ ಪ್ರಿಂಟ್ ಔಟ್ ತೆಗೆದು ಅಗತ್ಯ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು.
ನವೀಕರಣ ಪ್ರಸ್ತಾವನೆಗೆ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿಯ ನಕಲು ಅಥವ ದೃಡೀಕರಣ ಪತ್ರ ಕಳೆದ ಸಾಲಿನಲ್ಲಿ ಸಾಲ ಬಿಡುಗಡೆಯಾಗಿರುವ ಅಭ್ಯರ್ಥಿಗಳಿಗೆ ಮಾತ್ರ 1, 2, 3, 4 ಮತ್ತು 5ನೇ ವರ್ಷದ ಸಾಲದ ಪ್ರಸ್ತಾವನೆ, ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಪಡೆದ ಅರ್ಜಿ ಮತ್ತು , ಅದರ ಜೊತೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೃಢೀಕರಣ ಪತ್ರ ಮತ್ತು ಅಂಕಪಟ್ಟಿ ಹಾಗೂ ಈ ಹಿಂದೆ ನಿಗಮದಿಂದ ಬಿಡುಗಡೆ ಮಾಡಿರಿಉವ ಸಾಲದ ಮೊತ್ತಕ್ಕೆ ಶೇ. 10ರಷ್ಟು ಮತ್ತು ಶೇ. 2ರಷ್ಟು ಸೇವಾ ಶುಲ್ಕ ಸಾಲ ಮರು ಪಾವತಿ ಮಾಡಿದ ರಸೀದಿಯನ್ನು ಮೂಲ ಕಡತದ ಜೊತೆಗೆ ನಿಗಮಕ್ಕೆ ಕಳುಹಿಸಲು ಸೂಚಿಸಿದೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಯು ಹಿಂದಿನ ವರ್ಷಗಳ (including practical) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿಯನ್ನು ಸಲ್ಲಿಸಬೇಕು ಅಂತಹಾ ವಿದ್ಯಾರ್ಥಿಗಳಿಗೆ ಮುಂದಿನ ಸಾಲದ ಕಂತು ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ/ ಸಂಸ್ಥೆಯ ಬ್ಯಾಂಕ್ ಖಾತೆ, IFSC ಕೋಡ್ ಮತ್ತು ಈಮೇಲೆ ಐಡಿ ಹಾಗೂ ವಿದ್ಯಾರ್ಥಿಯ ಮೊಬೈಲ್ ನಂಬ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಬೇಕಾಗುವ ದಾಖಲಾತಿಗಳು:
1. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 6 ಲಕ್ಷದ ಒಳಗಿರಬೇಕು.
2. ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಎಸ್.ಎಸ್.ಎಲ್.ಸಿ, ಡಿಪ್ಲೊಮೊ, ಪಿಯುಸಿ, ಡಿಗ್ರಿ, ಸೆಮಿಸ್ಟರ್ ಮಾರ್ಕ್ ಕಾರ್ಡ್
4. ಟಿ.ಸಿ, ಸ್ಟಡಿ ಸರ್ಟಿಫಿಕೇಟ್ ಮೂಲ ಪ್ರತಿ, ಫೀಸ್ ಸ್ಟ್ರಕ್ಚರ್ (ಒಟ್ಟು ವ್ಯಾಸಂಗದ ಅವಧಿ)
5. ಸಿ.ಇ.ಟಿ/ ನೀಟ್ ಪ್ರಮಾಣ ಪತ್ರದ ಝೆರಾಕ್ಸ್
6. 50 ರೂ. ಛಾಪಾ ಕಾಗದ (Indemnity Bond) ತಂದೆ ಅಥವ ತಾಯಿಯ ಹೆಸರಿನಲ್ಲಿ (ನೋಟರಿಯೊಂದಿಗೆ) 2 party DM KMDC UDUPI ಎಂದು ನಮೂದಿಸಿರಬೇಕು.
7. ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ/ ಸಂಸ್ಥೆಯ ಬ್ಯಾಂಕ್ ಖಾತೆ, ಐ.ಎಫ್.ಎಸ್.ಸಿ ಕೋಡ್ ಮತ್ತು ಈಮೇಲೆ ಐಡಿ ಹಾಗೂ ವಿದ್ಯಾರ್ಥಿಯ ಮೊಬೈಲ್ ನಂಬ್ರದ ವಿವರ.

*4) ಕಿರುಸಾಲ ಯೋಜನೆ:*
ಈ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ ಮತ್ತು ಗ್ರಾಮಗಳಲ್ಲಿ ವಾಸವಾಗಿರುವ ಮತೀಯ ಅಲ್ಪಸಂಖ್ಯಾತರು ಸಾಮಾನ್ಯವಾಗಿ ಅನಕ್ಷರಸ್ಥರಾಗಿದ್ದು, ಅಂತಹಾ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲ ಅಥವ ಕುಶಲವಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
ನಿಗಮದಿಂದ ಫಲಾನುಪೇಕ್ಷಿಗಳು ಸ್ವ-ಸಹಾಯ ಗಂಪುಗಳನ್ನು ಇತರೆ ಇಲಾಖೆಗಳ ಅಥವಾ ಸರಕಾರೇತರ ಸಂಸ್ಥೆಗಳ ಮೂಲಕ ಸಂಘಟನೆ ಮಾಡಿ ಸ್ವ-ಸಹಾಯ ಗುಂಪುಗಳ ಮೂಲಕ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಬಹುದಾಗಿದೆ. ಸ್ವ-ಸಹಾಯ ಗುಂಪಿನ ಗಾತ್ರ 20 ಜನರಿಂದ 20 ಜನರವರೆಗೆ ಮಾತ್ರ ಮಿತಿಗೊಳಿಸಬೇಕಿದೆ. ಸ್ವ-ಸಹಾಯ ಗುಂಪು ಕನಿಷ್ಠ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಸ್ವ-ಸಹಾಯ ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಒಂದು ವರ್ಷವಾಗಿರಬೇಕು. ಸ್ವಸಹಾಯ ಸಂಘವು ಆರ್ಥಿಕ ಚಟುವಟಿಕೆಗಳಲ್ಲಿ ಲಾಭದಲ್ಲಿರಬೇಕು. ಸ್ವಸಹಾಯ ಗುಂಪಿನ ಸದಸ್ಯರಾಗಿರುವ ಫಲಾನುಭವಿ ಜಮೀನು ಹೊಂದಿದ್ದಲ್ಲಿ ಅಥವಾ ಸರ್ಕಾರಿ/ ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಲ್ಲಿ ಅವರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಂಜೂರು ಮಾಡತಕ್ಕದ್ದು. ಮೈಕ್ರೋ ಕ್ರೆಡಿಟ್ ಹಣಕಾಸು ಯೋಜನೆಯಡಿ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ ಶೇ. 50 ರಷ್ಟು ಸಹಾಯಧನ ಗರಿಷ್ಠ ರೂ. 5 ಸಾವಿರ ಪ್ರತಿ ಫಲಾನುಭವಿಗೆ ಫಲಾನುಭವಿಯ ಹೆಸರಿನಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿರುವ ಸಾಲವನ್ನು ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ನಲ್ಲಿ ತೆರೆದಿರುವ ಖಾತೆಯ ಸಂಖ್ಯೆ ನಮೂದಿಸಿ ಚೆಕ್ಕುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ. ಸ್ವಸಹಾಯ ಸಂಘಗಳು ಸಾಲವನ್ನು ಫಲಾನುಭವಿಗೆ ಶೇ.೫ರ ಬಡ್ಡಿದರದಲ್ಲಿ ನಿಡಬೇಕು.
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81 ಸಾವಿರ, ನಗರ ಪ್ರದೇಶದವರಿಗೆ ರೂಒಂದು ಲಕ್ಷದ ಮೂರು ಸಾವಿರ ರೂ. ಗಳ ಒಳಗಿರಬೇಕು.
2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಕೊಟೇಶನ್ ಅಥವಾ ಯೋಜನಾ ವರದಿ ಮತ್ತು ಲೈಸೆನ್ಸ್.
4. ಅರ್ಜಿದಾರರ ಅಥವಾ ಜಮೀನುದಾರರ ತಲಾ ಮೂರು ಭಾವಚಿತ್ರ.
5. ಸಂಘದ ಹೆಸರಿನ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಸಂಘ ರಚನೆಯಾಗಿ ಕನಿಷ್ಟ 1 ವರ್ಷವಾಗಿರಬೇಕು.
6. ಬ್ಯಾಂಕ್ ಬೇ ಬಾಕಿ ಪ್ರಮಾಣ ಪತ್ರ
7. ಸಂಘದ ನಡಾವಳಿ
8. ಸ್ವಸಹಾಯ ಗುಂಪಿನ ಗಾತ್ರ ಕನಿಷ್ಟ 10 ರಿಂದ 20 ಸದಸ್ಯರ ಮಿತಿಯಲ್ಲಿರಬೇಕು
9. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳು.

*5) ಗಂಗಾಕಲ್ಯಾಣ ಯೋಜನೆ:*
ಈ ಯೋಜನೆಯಡಿಯಲ್ಲಿ ಪ್ರಮುಖವಾಗಿ ವೈಯಕ್ತಿಕ ನೀರಾವರಿ ಯೋಜನೆಗಳಲ್ಲಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸುವುದು. ಮತೀಯ ಅಲ್ಪಸಂಖ್ಯಾತ ವರ್ಗಗಳ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರು ಒಂದೇ ಕಡೆ ಕನಿಷ್ಠ 1 ಎಕರೆ ಒಣ ಜಮೀನಿಗೆ 2 ಲಕ್ಷ ರೂ.ಗಳ ಘಟಕ ವೆಚ್ಚದಲ್ಲಿ ಕೊಳವೆ ಬಾವಿ/ ತೆರೆದ ಬಾವಿ ಕೊರೆಯಿಸಿ ಪಂಪ್ ಸೆಟ್ ಮತ್ತು ಇತರ ಉಪಕರಣಗಳನ್ನು ಸರಬರಾಜು ಮಾಡಿ ಹಾಗೂ ಬೆಸ್ಕಾಂಗಳಿಗೆ ವೈಎಂಡಿ ಮತ್ತು ಇಎಂಡಿ ಹಣ ಪಾವತಿಸಿ ನೀರಾವರಿ ಸೌಲಭ್ಯ ಒದಗಿಸುವುದು.
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81 ಸಾವಿರ, ನಗರ ಪ್ರದೇಶದವರಿಗೆ ರೂಒಂದು ಲಕ್ಷದ ಮೂರು ಸಾವಿರ ರೂ. ಗಳ ಒಳಗಿರಬೇಕು.
2. ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಆರ್.ಟಿ.ಸಿಯ ಮೂಲಪ್ರತಿ ಹಾಗೂ ಅರ್ಜಿದಾರರ ನಾಲ್ಕು ಭಾವಚಿತ್ರ.
4. ಇಸಿ, ಭೂ ನಕ್ಷೆ, ವಂಶವೃಕ್ಷ(ಸಂತತಿ ನಕ್ಷೆ) ಮತ್ತು ಕಂದಾಯ ರಸೀದಿ ಮೂಲ ಪತ್ರ.
5. ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ (ತಹಶೀಲ್ದಾರಿಂದ)
6. ಕೃಷಿ ಅವಲಂಭಿತರಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರಿಂದ ದೃಢೀಕರಣ ಪತ್ರ.
7. ಬೇರೆ ನೀರಾವರಿ ಸೌಲಭ್ಯ ಇಲ್ಲದ ಬಗ್ಗೆ ಸ್ವಯಂ ಘೋಷಣಾ ಪತ್ರ
8. ಕೊಳವೆ ಬಾವಿ ಕೊರೆಯುವ ಬಗ್ಗೆ ಗ್ರಾಮ ಪಂಚಾಯತ್ ನ ಪಿ.ಡಿ.ಒ ರಿಂದ ಆಕ್ಷೇಪಣಾ ರಹಿತ ಪತ್ರ
9. ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಮಾಣ ಪತ್ರ
10. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳು.

*6) ಕೃಷಿ ಭೂಮಿ ಖರೀದಿ ಯೋಜನೆ:*
ಈ ಯೋಜನೆಯಡಿಯಲ್ಲಿ ನಿಗಮವು ಕೃಷಿ ಭೂಮಿಯನ್ನು ಖರೀದಿಸಿ, ಗ್ರಾಮೀಣ ಪ್ರದೇಶದಲ್ಲಿರುವ ಭೂಮಿ ರಹಿತ ಅಲ್ಪಸಂಖ್ಯಾತರ ಬಡ ರೈತರಿಗೆ ಒದಗಿಸುತ್ತದೆ. ಪ್ರತಿ ಫಲಾನುಭವಿಗೆ 2 ಎಕರೆ ಖುಷ್ಕಿ ಅಥವ 1 ಎಕರೆ ತರಿ ಭೂಮಿಯನ್ನು ವಿತರಿಸಲಾಗುತ್ತದೆ. ಸದರಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಮತ್ತು ಕೃಷಿ ಭೂಮಿಯ ಬೆಲೆಯು ಹೆಚ್ಚಿದ ಪರಿಣಾಮವಾಗಿ, ಅಂತಹ ಭೂಮಿಯ ಮಾರ್ಗದರ್ಶಿ ಬೆಲೆಯನ್ನು ಹೆಚ್ಚಿಸಿ ಮತ್ತು 10 ಲಕ್ಷಕ್ಕೆ ಮಿತಿಗೊಳಿಸಿ (ನೊಂದಣಿ ಶುಲ್ಕ ಸೇರಿ) ಸರಕಾರವು ಇತ್ತೀಚೆಗೆ ಪರಿಷ್ಕೃತ ಆದೇಶವನ್ನು ಹೊರಡಿಸಿದೆ. ಫಲಾನುಭವಿಗೆ ನೀಡುವ ಭೂಮಿ ಬೆಲೆಯಲ್ಲಿ ಶೇ. 50 ರಷ್ಟು ಸಾಲ ಮತ್ತು ಉಳಿದ ಶೇ. 50 ರಷ್ಟನ್ನು ಸಹಾಯಧನವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು ಸಾಲಿಯಾನ ಶೇ. 6ರ ಬಡ್ಡಿ ದರದಲ್ಲಿ 10 ವರ್ಷ ಅವಧಿಯಲ್ಲಿ ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಫಲಾನುಭವಿಯು ಯಾವುದೇ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಸುಸ್ತಿದಾರರಾಗಿರಬಾರದು. ಫಲಾನುಭವಿಯ ವಾಸಸ್ಥಾನದಿಂದ ಖರೀದಿಸುವ ಜಮೀನು 5 ಕಿಮಿ ಅಂತರದಲ್ಲಿರಬೇಕು. ಜಮೀನನ್ನು ಪತಿ ಅಥವ ಪತ್ನಿಯ ಹೆಸರಿನಲ್ಲಿ ನೊಂದಣಿ ಮಾಡಲಾಗುವುದು. ಜಮೀನಿನ ಮೇಲೆ ಯಾವುದೇ ಸಾಲ, ತಂಟೆ ತಕರಾರು ಇರಬಾರದು. ಫಲಾನುಭವಿಯು ಈ ಯೋಜನೆಯಡಿಯಲ್ಲಿ ಖರೀದಿಸಿದ ದಿನಾಂಕದಿಂದ 10 ವರ್ಷಗಳ ಅವಧಿಯ ತನಕ ಪರಭಾರೆ ಮಾಡಕೂಡದು. ಈ ಯೋಜನೆಯಡಿ ಖರೀದಿಸಿದ ಜಮೀನಿನ ಕ್ರಯ ಪತ್ರದಲ್ಲಿ ಜಮೀನನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಒತ್ತೆ ಇಡ ತಕ್ಕದ್ದು. ಅದರಂತೆ ಜಮೀನಿನ ಕಾಲಂ 9ರಲ್ಲಿ ನಿಗಮದ ಹೆಸರಿಗೆ ಅಡಮಾನ ಮಾಡಲಾಗುವುದು.
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81 ಸಾವಿರ, ನಗರ ಪ್ರದೇಶದವರಿಗೆ ರೂಒಂದು ಲಕ್ಷದ ಮೂರು ಸಾವಿರ ರೂ. ಗಳ ಒಳಗಿರಬೇಕು.
2. ಅರ್ಜಿದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಅರ್ಜಿದಾರರ ಮೂರು ಭಾವಚಿತ್ರ.
4. ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
5. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 55 ವರ್ಷಗಳು.
6. ಭೂ ರಹಿತ ಕೃಷಿಕರಾಗಿರುವ ಬಗ್ಗೆ ಪ್ರಮಾಣ ಪತ್ರ
7. ಜಮೀನು ಕೃಷಿಗೆ ಯೋಗ್ಯವಾಗಿರುವ ಬಗ್ಗೆ ಕೃಷಿ ಅಧಿಕಾರಿಗಳಿಂದ ದೃಢೀಕರಣ
8. 8. ಭೂ ವಿಜ್ಞಾನ ಮತ್ತು ಗಣಿ ಇಲಾಖೆಯಿಂದ ಅಂತರ್ಜಾಲ ಲಭ್ಯತೆ ಬಗ್ಗೆ ದೃಢೀಕರಣ
9. ಜಮೀನು ಪಿ.ಟಿ.ಸಿ.ಎಲ್ ಕಾಯ್ದೆ ಉಲ್ಲಂಘನೆಯಾಗದಿರುವ ಬಗ್ಗೆ ಭೂ ಮಂಜೂರಾತಿ ತಾಲೂಕು ತಹಶೀಲ್ದಾರ ದೃಢೀಕರಣ ಪತ್ರ
10. ಪಹಣಿ, ಟೈಟಲ್ ಡೀಡ್, 13 ವರ್ಷಗಳ ಎನ್ಕಂಬರೆನ್ಸ್ ಸರ್ಟಿಫಿಕೇಟ್, ಚೆಕ್ಕುಬಂದಿ ಗುರುತಿಸುವ ದೃಢೀಕರಣ ಪತ್ರ, ಜಮೀನು ನಕಾಶೆ.
11. ಈ ಜಮೀನಿನ ಮೇಲೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದಿದ್ದರೆ ಸಾಲ ತಿರುವಳಿ ಪತ್ರ.
12. ಸದರಿ ಯೋಜನೆಯಡಿಯಲ್ಲಿ ಅಲ್ಪ ಸಂಖ್ಯಾತರ ಜಮೀನನ್ನು ಖರೀದಿಸುವ ಅವಕಾಶವಿರುವುದಿಲ್ಲ.
13. ಸಂಭಂಧಪಟ್ಟ ಉಪನೊಂದಣಾಧಿಕಾರಿಗಳಿಂದ ಮಾರ್ಗಸೂಚಿ ದರಗಳ ಪ್ರತಿ

*7) ಪಶು ಸಂಗೋಪನ ಯೋಜನೆ:*
ಈ ಯೋಜನೆಯಡಿ ಪಶುಸಂಗೋಪನೆಗೆ ಉತ್ತೇಜನ ನೀಡಿ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರು ನಿರಂತರ ಆದಾಯ ಹೊಂದುವ ಸಲುವಾಗಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಶೇ. 50 ರಷ್ಟು ಸಹಾಯಧನ ಸೇರಿ 40 ಸಾವಿರ ರೂ. ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಶೇ. 10 ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲಾಗುವುದು.
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81 ಸಾವಿರ, ನಗರ ಪ್ರದೇಶದವರಿಗೆ ರೂಒಂದು ಲಕ್ಷದ ಮೂರು ಸಾವಿರ ರೂ. ಗಳ ಒಳಗಿರಬೇಕು.
2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಕೊಟೇಶನ್ ಅಥವ ಯೋಜನಾ ವರದಿ ಮತ್ತು ಲೈಸೆನ್ಸ್ ಅಥವ ಪಂಚಾಯತ್ ಶಿಫಾರಸ್ಸು ಪತ್ರ
4. ಅರ್ಜಿದಾರರ ಮತ್ತು ಜಾಮೀನುದಾರರ ಮೂರು ಭಾವಚಿತ್ರ.
5. ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
6. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 45 ವರ್ಷಗಳು.
7. ಫಲಾನುಭವಿ ಅಥವ ಅವರ ಕುಟುಂಬದ ಸದಸ್ಯರು ಕೇಂದ್ರ ಅಥವ ರಾಜ್ಯ ಸರಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ.
8. ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ದೃಢೀಕರಣ ಪತ್ರ
9. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ.

*8) ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ*
ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಾಗದೆ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತಹಾ ಆರ್ಥಿಕವಾಗಿ ಹಿಂದುಳಿದಿರುವ ಫಲಾನುಭವಿಗಳನ್ನು ಆಯ್ಕೆ ಮಾಡಿ ಇವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಠ 3 ಲಕ್ಷ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಖರೀದಿಸುವ ವಾಹನದ ಮೌಲ್ಯವು ಕನಿಷ್ಠ 4 ಲಕ್ಷದಿಂದ 7.50 ಲಕ್ಷಗಳಾಗಿರತಕ್ಕದ್ದು (ತೆರಿಗೆ ಹೊರತುಪಡಿಸಿ)
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 4.50 ಲಕ್ಷ ರೂ. ಗಳ ಒಳಗಿರಬೇಕು.
2. ಅರ್ಜಿದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಕೊಟೇಶನ್ ಮತ್ತು ಲೈಸೆನ್ಸ್ ಬ್ಯಾಡ್ಜ್ ನೊಂದಿಗೆ
4. ಅರ್ಜಿದಾರರ ಮೂರು ಭಾವಚಿತ್ರ.
5. ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
6. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 45 ವರ್ಷಗಳು.
7. ಫಲಾನುಭವಿ ಅಥವ ಅವರ ಕುಟುಂಬದ ಸದಸ್ಯರು ಕೇಂದ್ರ ಅಥವ ರಾಜ್ಯ ಸರಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ.
8. ಕಳೆದ ೫ ವರ್ಷಗಳಲ್ಲಿ ಟ್ಯಾಕ್ಸಿ/ ಗೂಡ್ಸ್ ವಾಹನ ಖರೀದಿಗೆ ಸಂಬಂಧಿಸಿದಂತೆ ಸರಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ದೃಢೀಕರಣ ಪತ್ರ
9. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ.

*9.ಪ್ರವಾಸಿ ಸ್ವಯಂ ಉದ್ಯೋಗ ಯೋಜನೆ (ಕೇರಳ ಮಾದರಿ)*
ಕೊಲ್ಲಿ ರಾಷ್ಟ್ರಗಳಲ್ಲಿ ರಾಜ್ಯದಿಂದ ಉದ್ಯೋಗ ಅರಸಿ ನಂತರ ಹಿಂತಿರುಗಿ ಬರುವ ಉದ್ಯೋಗಾವಕಾಶ ವಂಚಿತರಾದ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹಾಗೂ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ರೂ. 10 ಲಕ್ಷಗಳ ಸಾಲವನ್ನು ಶೇ. 5 ರ ಬಡ್ಡಿ ದರದಲ್ಲಿ ಕೊಲೈಟರಲ್ ಭದ್ರತೆಯೊಂದಿಗೆ ನಿಗಮದಿಂದ ಸಾಲ ಸೌಲಭ್ಯ ನೀಡಲಾಗುವುದು. ನಿಗಮದಿಂದ ನೀಡಲಾಗಿರುವ ಸಾಲವನ್ನು 7 ವರ್ಷಗಳೊಳಗೆ ಮರುಪಾವತಿಸತಕ್ಕದ್ದು.
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 4.50 ಲಕ್ಷ ರೂ. ಗಳ ಒಳಗಿರಬೇಕು.
2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಕೊಟೇಶನ್ ಅಥವ ಯೊಜನಾ ವರದಿ ಮತ್ತು ಲೈಸೆನ್ಸ್
4. ಅರ್ಜಿದಾರರ ಮೂರು ಭಾವಚಿತ್ರ.
5. ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
6. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 45 ವರ್ಷಗಳು.
7. ಫಲಾನುಭವಿ ಅಥವ ಅವರ ಕುಟುಂಬದ ಸದಸ್ಯರು ಕೇಂದ್ರ ಅಥವ ರಾಜ್ಯ ಸರಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ.
8. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ.
9. ಅಭ್ಯರ್ಥಿಯು ಫೈನಲ್ ಎಕ್ಸಿಟ್ ಆಗಿರುವ ಬಗ್ಗೆ ಪಾಸ್ ಪೋರ್ಟ್ ಮತ್ತು ವೀಸಾ ಪ್ರತಿ.
10. ಕೊಲೈಟರಲ್ ಭದ್ರತೆ ನೀಡುವ ದಾಖಲಾತಿಗಳ ಪ್ರತಿಗಳು.