ಸಮಾಜಮುಖಿಯಾದ ಸಾಮಾನ್ಯ ಯುವಕ ಇಂದು ಬಿಲ್ಡರ್ ಆಗಿ ಬೆಳೆದಾಗ ಅಭಿಮಾನ ಆಗುತ್ತಿದೆ -: ಎಸ್.ಬಿ.ದಾರಿಮಿ*

ಸಮಾಜದ ತಲಮಟ್ಟದ ಜನರ ಸ್ಥಿತಿಗತಿಯನ್ನು ಅರಿತುಕೊಂಡವರು ಉಧ್ಯಮ ರಂಗದಲ್ಲಿ ಬೆಳೆದು ಬಂದರೆ ಅವರಿಂದ ಜನರಿಗೆ ಉಪಕಾರವಾಗುವ ಒಳಿತುಗಳನ್ನು ನಿರೀಕ್ಷಿಸಲು ಸಾಧ್ಯವಿದೆ ಎಂದು ಖ್ಯಾತ ವಾಗ್ಮಿ ಎಸ್.ಬಿ.ದಾರಿಮಿ ಹೇಳಿದರು. ಅವರಿಂದು ಸುಲ್ತಾನ್ ಬಿಲ್ಡರ್ಸ್ ನ ನೂತನ ಕಚೇರಿತ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯು.ಬಿ. ಮಹಮ್ಮದ್ ರವರು ಸಣ್ಣ ಪ್ರಾಯದಲ್ಲೇ ಒಬ್ಬ ಯಶಸ್ವಿ ಬಿಲ್ಡರ್ ಆಗಿ ಬೆಳೆದು ಬಂದಿರುವುದು ಸಂತಸ ತಂದಿದೆ. ಯು.ಬಿ ಮಹಮ್ಮದ್ ಸಮಾಜ ಸೇವೆಯಲ್ಲಿ ಟಾಲೆಂಟ್ ರಿಸರ್ಚ್ ಪೌಂಡೇಶನ್ ಮೂಲಕ ಗುರುತಿಸಿಕೊಂಡವರು, ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಅವರಿಂದ ಸಮಾಜಕ್ಕೆ ಪ್ರಯೋಜನ ಹೆಚ್ಚು ಸಿಗಲಿದೆ ಎಂದು ದಾರಿಮಿ ಹೇಳಿದರು.

ಮಂಗಳೂರು ಪ್ರಾಪರ್ಟೀಸ್ ಡಾಟ್ ಕಾಮ್ ನ ನಿರ್ಧೇಶಕರಾದ ರೋಗೆರ್ ಎಂ ಪಿಂಟೋ ಅವರು ಮಾತನಾಡುತ್ತಾ, ನಗರದ ಹೊರವಲಯವನ್ನು ಕೇಂದ್ರೀಕರಿಸಿ ಸುಲ್ತಾನ್ ಬಿಲ್ಡರ್ಸ್ ಐದನೇ ಪ್ರಾಜೆಕ್ಟ್ ಮಾಡುತ್ತಿದೆ. ಈಗ ಅಡ್ಯಾರ್ ನ ಪ್ರಕೃತಿ ಮನೋಹರ ತಾಣದಲ್ಲಿ ವಾಟರ್ ಪ್ರಂಟ್ ವ್ಯೂವ್ ಎಂಬ 180 ಅಪಾರ್ಟ್ ಮೆಂಟ್ ಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ. ಇಷ್ಟು ಸಣ್ಣ ಪ್ರಾಯದಲ್ಲಿ ಇಂತಹ ದೊಡ್ಡ ಯೋಜನೆ ಮಾಡಲು ಆತ್ಮವಿಶ್ವಾಸದ ಜೊತೆಗೆ ದೈರ್ಯವೂ ಬೇಕು. ಸುಲ್ತಾನ್ ಬಿಲ್ಡರ್ಸ್ ನ ಮಾಲಕ ಯು.ಬಿ ಮಹಮ್ಮದ್ ತನ್ನ ದೊಡ್ಡ ಕನಸನ್ನು ನನಸು ಮಾಡಲು ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಕಚೇರಿಯನ್ನು ಯು.ಬಿ ಮಹಮ್ಮದ್ ರವರ ತಂದೆಯವರಾದ ಅಬ್ದುಲ್ ಖಾದರ್ ಯು.ಬಿ ಯವರು ಉದ್ಘಾಟಿಸಿದರು. ಸುಲ್ತಾನ್ ಬಿಲ್ಡರ್ಸ್ ನ ನೂತ ಪ್ರಾಜೆಕ್ಟ್ ನ ಕ್ಯಾಟಲಾಗನ್ನು ವಿಶ್ವಾಸ್ ಎಸ್ಟೇಟ್ ನ ಮಾಲಕರಾದ ಸುಲೈಮಾನ್ ಶೇಖ್ ಬೆಳುವಾಯಿ, ಅಸ್ಗರ್ ಹಾಜಿ, ಗ್ರಾಮ ಪಂಚಾಯತ್ ಸದಸ್ಯರಾದ ಯಾಸೀನ್ ಜಲೀಲ್ ಮತ್ತು ಅತಿಥಿಗಳು ಬಿಡುಗಡೆಗೊಳಿಸಿದರು.

ಸುಲ್ತಾನ್ ಬಿಲ್ಡರ್ಸ್ ನ ಪ್ರತಿಷ್ಠಿತ ನಿರ್ಮಾಣವಾದ ಸುಲ್ತಾನ್ ವ್ಯೀವ್ ಲಕ್ಸೂರಿ ವಾಟರ್ ಪ್ರೆಂಟ್ ಅಪಾರ್ಟ್ ಮೆಂಟ್ ಅಡ್ಯಾರ್ ಪ್ರದೇಶದಲ್ಲಿ ತಲೆ ಎತ್ತಲಿದ್ದು ಈ ನಿರ್ಮಾಣದಲ್ಲಿ ಎಲ್ಲಾ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿದೆ. ನೇತ್ರಾವತಿ ನದಿ ಕಿನಾರೆಯ ಪ್ರಕೃತಿ ರಮಣೀಯ ಪ್ರದೇಶದಲ್ಲಿ ತಲೆ ಎತ್ತಲಿರುವ ಅಪಾರ್ಟ್ ಮೆಂಟ್ ಬಡ್ಡಿ ರಹಿತವಾಗಿ ಗ್ರಾಹಕರಿಗೆ ಕಂತುಗಳಲ್ಲಿ ಒದಗಿಸಲು ಸಂಸ್ಥೆ ನಿರ್ಧರಿಸಿದೆ. ಮಧ್ಯಮ ವರ್ಗ ಮತ್ತು ಶ್ರಮಜೀವಿಗಳ ಸ್ವಂತ ಮನೆಯ ಕನಸನ್ನು ನನಸು ಮಾಡಲು ಸುಲ್ತಾನ್ ಬಿಲ್ಡರ್ಸ್ ಇಪ್ಪತ್ತು ಲಕ್ಷದಿಂದ ಮನೆಯ ಮಾರಾಟ ದರ ನಿಗದಿಪಡಿಸಿದೆ. ಈ ಯೋಜನೆ ಕಮರ್ಶಿಯಲ್ ಜೊತೆಗೆ ಜನಸ್ನೇಹಿಯಾಗಿದೆ ಎಂದು ಎಸ್ದೀಪಿಐ ರಾಜ್ಯಾಧ್ಯಕ್ಷರಾದ ಇಲ್ಯಾಸ್ ತುಂಬೆಯವರು ಪ್ರಶಂಸೆ ವ್ಯಕ್ತಪಡಿಸಿದರು. ಎಸ್ಡೀಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ, ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ, ಮುಸ್ಲಿಂ ಸೆಂಟ್ರಲ್ ಕಮೀಟಿ ಸದಸ್ಯ ಹನೀಫ್ ಖಾನ್ ಕೊಡಾಜೆ ಮುಂತಾದ ಗಣ್ಯರು ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.