ಒಂದು ಅತ್ಯಾಚಾgವು ಸಾರ್ವಜನಿಕ ನೆನಪಿನಲ್ಲಿ ಎಷ್ಟು ಕಾಲ ಇರಬಲ್ಲದು? ಕಥುವಾದಲ್ಲಿ ಒಬ್ಬ ಪೊಲೀಸನನ್ನು ಒಳಗೊಡಂತೆ ಗಂಡಸರ ಒಂದು ಗುಂಪು ಎಂಟು ವರ್ಷದ ಒಬ್ಬ ಹೆಣ್ಣುಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಕ್ರೂರವಾಗಿ ಚಿತ್ರಹಿಂಸೆ ಮಾಡಿ ಕೊಂದು ಹಾಕಿದರು. ಹೀಗಾಗಿ ನಮ್ಮ ಸಮಾಜದ ಸಮಗ್ರ ವೈಫಲ್ಯದ ಕಥನವಾಗಿ ಕಥುವಾದ ನೆನಪು ಉರಿಯುತ್ತಲೇ ಇರುತ್ತದೆ ಎಂದು ಯಾರಾದರೂ ಭಾವಿಸಬಹುದು. ಈ ಅತ್ಯಾಚಾರ ಎಸಗಿದ ಬೇಟೆಗಾರರಿಗೆ ಆ ಪುಟ್ಟ ಕೂಸಿನ

ನಾವೇಕೆ ಕಥುವಾವನ್ನು ಮರೆಯುತ್ತೇವೆ, ಮತ್ತು ಏಕೆ ನಾವು ಮರೆಯಕೂಡದು
ಭಾರತದ ವಿಶಾಲ ರಾಷ್ಟ್ರೀಯ ಕಥನದಲ್ಲಿ ಕಥುವಾಗೊಂದು ಜಾಗವಿದೆಯೇ?

ಒಂದು ಅತ್ಯಾಚಾgವು ಸಾರ್ವಜನಿಕ ನೆನಪಿನಲ್ಲಿ ಎಷ್ಟು ಕಾಲ ಇರಬಲ್ಲದು? ಕಥುವಾದಲ್ಲಿ ಒಬ್ಬ ಪೊಲೀಸನನ್ನು ಒಳಗೊಡಂತೆ ಗಂಡಸರ ಒಂದು ಗುಂಪು ಎಂಟು ವರ್ಷದ ಒಬ್ಬ ಹೆಣ್ಣುಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಕ್ರೂರವಾಗಿ ಚಿತ್ರಹಿಂಸೆ ಮಾಡಿ ಕೊಂದು ಹಾಕಿದರು. ಹೀಗಾಗಿ ನಮ್ಮ ಸಮಾಜದ ಸಮಗ್ರ ವೈಫಲ್ಯದ ಕಥನವಾಗಿ ಕಥುವಾದ ನೆನಪು ಉರಿಯುತ್ತಲೇ ಇರುತ್ತದೆ ಎಂದು ಯಾರಾದರೂ ಭಾವಿಸಬಹುದು. ಈ ಅತ್ಯಾಚಾರ ಎಸಗಿದ ಬೇಟೆಗಾರರಿಗೆ ಆ ಪುಟ್ಟ ಕೂಸಿನ ದೇಹ ತಾವು ಬಯಸದ ಹೊರಗಿನವರಾದ ಬುಡಕಟ್ಟು ಜನಾಂಗದ್ದಾಗಿ ಮತ್ತು ಮುಸ್ಲಿಮರದ್ದಾಗಿ ಮಾತ್ರ ಕಂಡಿತು. ಮತ್ತು ಈ ಅಪರಾಧ ಘೋರತೆಯೇ ಸಾಲದೆಂಬಂತೆ ಅತ್ಯಾಚಾರಿಗಳ ಪರವಾಗಿ ಹಿಂದೂ ಏಕತಾ ಮಂಚ್ ಒಂದು ಬಹಿರಂಗ ಪ್ರದರ್ಶನವನ್ನು ನಡೆಸಿತು.
ಇವೆಲ್ಲದರ ಪರಿಣಾಮವಾಗಿ ಈ ಅಪರಾಧಕ್ಕೆ ಕಾರಣವಾದ ಬೆಳವಣಿಗೆಗಳು ನಾವೆಂಥಾ ರಾಷ್ಟ್ರ ಮತ್ತು ಸಮಾಜವಾಗುವ ಕಡೆ ಹೊರಟಿದ್ದೇವೆ ಎಂಬ ಬಗ್ಗೆ ಕೆಲವು ಕಸಿವಿಸಿಯುಂಟುಮಾಡುವಂಥಾ ಪ್ರಶ್ನೆಗಳನ್ನು ಹುಟ್ಟುಹಾಕಿದವು. ಈ ಭೀಕರ ಅಪರಾಧವು ಸಂಭವಿಸಿದ ವಿವರಗಳನ್ನು ಎಳೀಳೆಯಾಗಿ ಬಿಡಿಸಿಡುವ ಪೊಲೀಸರ ಚಾರ್ಜ್‌ಶೀಟನ್ನು ಓದಿದವರಿಗೆ ಮತ್ತು ಎಲ್ಲೆಡೆ ಲಭ್ಯವಾದ ಆ ಎಳೆ ಕಂದಮ್ಮನ ಮುಗ್ಧ ಮುಖವನ್ನು ನೋಡಿದವರಿಗೆ ನಡೆದ ಘಟನೆಯ ಭೀಕರತೆಯ ಪ್ರಮಾಣದ ಇಂಚಿಂಚೂ ಅರ್ಥವಾಗುವಂತೆ ಮಾಡಿತ್ತಲ್ಲದೆ ಯಾವುದನ್ನೂ ಊಹೆಗೆ ಬಿಟ್ಟಿರಲಿಲ್ಲ. ಆಕೆಯ ಮುಖ ಎಷ್ಟು ವ್ಯಾಪಕವಾಗಿ ಜನರ ಮನಸ್ಸಿನಾಳದಲ್ಲಿ ಅಚ್ಚಾಗಿತ್ತೆಂದರೆ ದೇಶದ ಬೀದಿಬೀದಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಆ ಮುಖವೇ ಕಾಣಬರುತ್ತಿತ್ತು. ಆ ಮಗುವಿನ ಮುಖ ನ್ಯಾಯದ ಒತ್ತಾಯದ ಗುರುತಾಗಿ ಮಾರ್ಪಾಡಾಗಿತ್ತು.
ಕೇವಲ ಕೆಲವೇ ತಿಂಗಳ ಹಿಂದೆ ಇಷ್ಟೆಲ್ಲಾ ವ್ಯಾಪಕ ಸಾಮಾಜಿಕ ಪ್ರತಿಕ್ರಿಯೆಗಳಿಗೆ ಕಾರಣವಾದ ಕಥುವಾ ನಿಧಾನವಾಗಿ ಜನಮಾನಸದಿಂದ ಮರೆಯಾಗುತ್ತಿದೆ. ಘೋರವಾದ ದುರಂತಗಳು ನಮ್ಮನ್ನು ಆಳವಾಗಿ Pಲಕುವುದು ನಿಜವಾದರೂ ಅವುಗಳನ್ನು ನಾವು ಮರೆತುಬಿಡಬಲ್ಲೆವು ಎಂಬುದೇ ದೊಡ್ಡ ವಿಪರ್ಯಾಸವಾಗಿದೆ. ಮೂಲಭೂತವಾಗಿ ಸಾರ್ವಜನಿಕ ನೆನಪೆಂಬ ಪ್ರಾಥಮಿಕ ಸರಕನ್ನಾಧರಿಸಿಯೇ ರಾಷ್ಟ್ರೀಯ ಮತ್ತು ಪ್ರಾದೇಶಿಕ ಅನನ್ಯತೆಗಳನ್ನು ಕಟ್ಟಿಕೊಳ್ಳಲಾಗುತ್ತದೆ. ಪರಿಣಾಮವಾಗಿ ಅವು ರಾಷ್ಟ್ರೀಯತೆಗ ಕಥನದೊಂದಿಗೆ ನಿಕಟವಾಗಿ ಬೆಸೆದುಕೊಂಡಿವೆ. ಅನನ್ಯತೆಗಳನ್ನು ಮತ್ತು ರಾಜಕೀಯವನ್ನು ರೂಪಿಸುವಲ್ಲಿ ಸಾರ್ವಜನಿಕ ನೆನಪುಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ರಾಷ್ಟ್ರೀಯತೆಯ ಕಥನದಲ್ಲಿ ಯಾವುದನ್ನು ನೆನಪಿಸಿಕೊಳ್ಳಲಾಗುವುದು? ಯಾವುದನ್ನು ಮರೆಯಲಾಗುವುದು? ಯಾವುದು ಆಳುವ ರಾಜಕೀಯ ವರ್ಗದ ಹಿತಾಸಕ್ತಿಗಳ ಪರವಾಗಿದೆಯೋ ಅವನ್ನು ಮಾತ್ರ ಸಾರ್ವಜನಿಕರ ನೆನಪಿನಲ್ಲಿ ನೆನಪಿನಲ್ಲಿಡಲಾಗುವುದು ಅಥವಾ ಪ್ರಮುಖವಾಗಿ ನೆನಪಿನಲ್ಲುಳಿಸಲಾಗುವುದು ಎಂಬುದರಲ್ಲಿ ಎರಡು ಮಾತಿಲ್ಲ. ಕಥುವಾದ ನೆನಪು ಆಳುವ ಪಕ್ಷದ ಹಿತಾಸಕ್ತಿಯಲ್ಲೂ ಇಲ್ಲ. ಹಾಗೆಯೇ ಆ ನೆನಪು ವಿರೋಧ ಪಕ್ಷಗಳಿಗೂ ಅಷ್ಟಾಗಿ ಸಹಾಯಕ್ಕೆ ಬರುವುದಿಲ್ಲ. ಎರಡೂ ಪಕ್ಷಗಳಿಗೂ ಕಥುವಾವನ್ನು ಓಟಾಗಿ ಪರಿವರ್ತಿಸಿಕೊಳ್ಳೂವುದು ಅಷ್ಟು ಸುಲಭವಲ್ಲ.
ಅದೇನೇ ಇದ್ದರೂ ಸಾರ್ವಜನಿಕ ನೆನನ್ನು ಸಂಪೂರ್ಣವಾಗಿ ಅಧಿಕಾರರೂಢರೇ ತೀರ್ಮಾನ ಮಾಡಲಾಗುವುದಿಲ್ಲ. ಅದು ಸರ್ಕಾರ, ಮಾಧ್ಯಮ ಮತ್ತು ನಾಗರಿಕರೊಡನೆ ನಡೆಯುವ ಸಂವಾದದ ಫಲಶೃತಿಯಾಗಿದೆ. ಸಾರ್ವಜನಿಕ ನೆನಪಿನ ಸೃಷ್ಟಿಕರ್ತರ ಈ ಮೂವರ ನಡುವೆ ನೆನಪು ಹಾಗೂ ಮರೆವಿನ ಪ್ರಕ್ರಿಯೆಗಳಾಗಿ ಈ ಸಂವಾದವು ನಡೆಯುತ್ತದೆ. ರಾಷ್ಟ್ರೀಯತೆಯ ಕಥನದಿಂದ ಯಾವುದನ್ನು ಹೊರಗಿಟ್ಟು ಮರೆತುಬಿಡಬೇಕೆಂದು ಸರ್ಕಾರವು ಬಯಸುತ್ತದೋ ಅದು ಮಾಧ್ಯಮ ಮತ್ತು ಜನತೆಯ ನೆನಪಿನ ಆಸಕ್ತಿಗಳ ಪರವಾಗಿಲ್ಲದೆ ಇರಬಹುದು. ಉದಾಹರಣೆಗೆ ಕಥುವಾದ ಪ್ರಕರಣದಲ್ಲಿ ಅದರ ನೆನಪು ನ್ಯಾಯಕ್ಕಾಗಿನ ಚಳಾವಳಿಗೆ ಕಸುವು ತುಂಬಬಹುದು. ಹೀಗಾಗಿ ಒಂದು ನಿರ್ದಿಷ್ಟ ಬಗೆಯ ಫಲಿತಾಂಶ ಬರುವ ನಿರೀಕ್ಷೆಯೊಂದಿಗೆ ಕಥುವಾದ ನೆನಪನ್ನು ಉಳಿಸಿಕೊಳ್ಳುವುದು ನಾಗರಿಕ ಸಮಾಜದ ಹಿತಾಸಕ್ತಿಗೆ ಪೂರಕವಾಗಿದೆ. ಆದರೆ ನೆನೆಪಿನ ಕ್ರಿಯೆಯು ಇನ್ನೂ ಹಲವಾರು ಕಾಳಜಿಗಳಿಂದ ಪ್ರಭಾವಿತವಾಗುತ್ತದೆ. ಒಂದು ಘಟನೆಯು ಮತ್ತೊಮ್ಮೆ ಸಾರ್ವಜನಿಕ ನೆನಪನ್ನು ಪುನರುದ್ದೀಪನಗೊಳಿಸಬಹುದೇ ಎಂಬುದು ಆ ಘಟನೆಯ ಬಗ್ಗೆ ಹೊಸ ಸಂಗತಿಗಳು ಬೆಳಕಿಗೆ ಬಂದಿವೆಯೇ ಎಂಬುದನ್ನೂ ಮತ್ತು ಆ ಘಟನೆಯ ಐತಿಹಾಸಿಕ ಮಹತ್ವವು ಬದಲಾಗಿದೆಯೇ ಎಂಬುದನ್ನು ಆಧರಿಸಿರುತ್ತದೆ. ಹೀಗಾಗಿ ನೆನಪಿಟ್ಟುಕೊಳ್ಳುವ ಕರ್ತವ್ಯ ಯಾರದು?
ಕಥುವಾವನ್ನು ಮತ್ತೆ ಸಾರ್ವಜನಿಕ ನೆನಪಿಗೆ ತರುವ ಜವಾಬ್ದಾರಿ ಮಾಧ್ಯಮಗಳದ್ದು ಎಂದು ಕೆಲವರು ಹೇಳಬಹುದು. ಹಾಗೆ ನೋಡಿದಲ್ಲಿ ಈ ವಿಷಯದಲ್ಲಿ ಮಾಧ್ಯಮಗಳು ಹೊಣೆಗಾರಿಕೆಯರಿತೇ ನಡೆದಿವೆ ಎಂದು ಹೇಳಬೇಕು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯ ಮರು ತನಿಖೆ ಮಾಡಲು ಸಿಬಿಐ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿತೆಂದು ಅಕ್ಟೋಬರ್ ೫ ರಷ್ಟು ಇತ್ತಿಚೆಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೂ ಸಮಯ ಸರಿಯುತ್ತಿದ್ದಂತೆ ಕಥುವಾ ಯಾವ ಪ್ರಮಾಣದ ತೀವ್ರತೆಯೊಂದಿಗೆ ನಮ್ಮ ಸಾಮೂಹಿಕ ಪ್ರಜ್ನೆಯನ್ನು ಕಲಕಿತ್ತೋ ಆ ತೀವ್ರತೆ ಕಡಿಮೆಯಾಗುತ್ತಲೇ ಹೋಗುತ್ತಿದೆ. ನಮ್ಮ ರಾಷ್ಟ್ರೀಯ ಅನನ್ಯತೆಯನ್ನು ಕಟ್ಟಿಕೊಳ್ಳಲು ಬೇಕಾದ ಕಥನದೊಳಕ್ಕೆ ಕಥುವಾ ಅಷ್ಟು ಸುಲಭವಾಗಿ ಸೇರಿಕೊಳ್ಳುವುದಿಲ್ಲ. ರಾಷ್ಟ್ರನಿರ್ಮಾಣದ ಯೋಜನೆಯೊಂದಿಗೆ ಹೆಣೆದುಕೊಂಡಿರುವ ಪ್ರತಿಷ್ಟೆಯ ಸಂಕೇತಗಳೊಂದಿಗೆ ಬೆರೆಯುವುದಿಲ್ಲ. ಏಕೆಂದರೆ ಕಥುವಾ ಒಂದು ಅಪಮಾನದ ಕ್ಷಣವಾಗಿದೆ.
೨೦೧೨ರ ಡಿಸೆಂಬರ್ ೧೬ರಂದು ಸಂಭವಿಸಿದ ಜ್ಯೋತಿಸಿಂಗ್ ಪ್ರಕರಣಕ್ಕೆ ಹೋಲಿಸಿದಲ್ಲಿ ದೇಶದ ಸಾಂಸ್ಥಿಕ ನೆನಪಿನಲ್ಲಿ ಕಥುವಾ ಏಕೆ ಅದೇ ಸ್ಥಾನವನ್ನು ಪಡೆದುಕೊಳ್ಳಲಿಲ್ಲ. ದೆಹಲಿ ಘಟನೆಯಂತೆ ಕಥುವಾದ ಘಟನೆಗಳು ಸಹ ನಮ್ಮ ವಿಶಾಲ ರಾಷ್ಟ್ರೀಯ ಕಥನದಲ್ಲಿರುವ ಬಿರುಕುಗಳನ್ನು ಎತ್ತಿತೋರಿಸುತ್ತದೆ. ಅವು ನಮ್ಮನ್ನು ಅಂತರ್ಮುಖಿಗಳಾಗಿ ಸ್ವವಿಮರ್ಶೆ ಮಾಡಿಕೊಳ್ಳುವ ಒತ್ತಡವನ್ನು ಹೇರಿದೆ.
ಏಕೆ ಒಂದು ವೈಫಲ್ಯವು ಮಾತ್ರ ಪದೇಪದೇ ಪುನರುದ್ದೀಪನಗೊಂದು ವಿಶಾಲ ರಾಷ್ಟ್ರೀಯ ಕಥನದೊಳಗೆ ಜಾಗ ಪಡೆಯುತ್ತವೆ ಹಾಗೂ ಅಷ್ಟೇ ಘೋರವಾದ ಮತ್ತೊಂದರ ನೆನಪನ್ನು ಮರೆಯಾಗಲು ಬಿಡಲಾಗುತ್ತದೆ. ಮೊದಲನೆಯದಕ್ಕೆ ಹೆಚ್ಚಿನ ಸಾಂಸ್ಥಿಕ ಗಮನ ಸಿಕ್ಕಿದ್ದು ಎರಡನೆಯದಕ್ಕೆ ಅಷ್ಟು ಸಿಗಲಿಲ್ಲ ಎಂಬುದು ಅದಕ್ಕೆ ಕಾರಣವೇ? ಅಥವಾ ಒಂದು ನಡೆದದ್ದು ನಗರ ಪ್ರದೇಶದಲ್ಲಿ ಮತ್ತೊಂದು ನಡೆದದ್ದು ಗ್ರ್ರಾಮೀಣ ಪರಿಸರದಲ್ಲಿ ಎಂಬ ಕಾರಣವೇ? ಅಥವಾ ಆಯಾ ಘೋರಕೃತ್ಯಗಳಿಗೆ ಬಲಿಪಶುಗಳಾದವರ ಸಾಮಾಜಿಕ ಮತ್ತು ರಾಜಕೀಯ ವ್ಯತ್ಯಾಸಗಳಿದ್ದದ್ದು ಕಾರಣವೇ? ಪ್ರಾಯಶಃ ಕಥುವಾ ಪ್ರಕರಣದಲ್ಲಿ ಲೈಂಗಿಕ ಹಿಂಸಾಚಾರದ ಕಥನವನ್ನು ಕೋಮುವಾದದ ಕಥನವು ಆವರಿಸಿಕೊಂಡಿದ್ದು ಮತ್ತದು ಯಾವ ರಾಜಕೀಯ ಪಕ್ಷಗಳಿಗೂ ಅನುಕೂಲಕಾರಿಯಾಗಿರಲಿಲ್ಲವೆಂಬುದೇ ಒಂದು ಪ್ರಮುಖ ಕಾರಣವಾಗಿರಬಹುದು.
ಅದೇನೇ ಇದ್ದರೂ ನಮ್ಮ ಸಾಮೂಹಿಕ ಕಥನಗಳು ಅರ್ಥಪೂರ್ಣವೂ ಮತ್ತು ಭೋಧಪ್ರದವೂ ಆಗಿರಬೇಕೆಂದರೆ ನಮ್ಮ ಸಾಮೂಹಿಕ ವೈಫಲ್ಯಗಳನ್ನು ಗತದಲ್ಲಿ ಹೂತುಹಾಕಲಂತೂ ಸಾಧ್ಯವಿಲ್ಲ. ಒಂದು ಸಮಾಜವಾಗಿ ಕಥುವಾದಂಥ ಘಟನೆಗಳು ನಮ್ಮ ಮೇಲೆ ಹೇರುವ ಸ್ವವಿಮರ್ಶೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ಏಕೆಂದರೆ ಒಂದು ವೇಳೆ ನಾವು ಇದನ್ನು ಮರೆತದ್ದೇ ಆದಲ್ಲಿ ನಮ್ಮ ಪರವಾಗಿ ರೂಪುಗೊಳ್ಳುತ್ತಿರುವ ರಾಷ್ಟ್ರೀಯ ಕಥನಗಳಿಗೆ ನಾವೂ ಯಾವುದೇ ಪ್ರತಿರೋಧವನ್ನು ತೋರಿದಂತಾಗುವುದಿಲ್ಲ. ಇದನ್ನು ನಾವು ಮರೆತರೆ ಇಂಥಾ ಘೋರ ಅಪರಾಧಗಳನ್ನು ಸರ್ವೇ ಸಾಮಾನ್ಯ ಮಾಡಿಬಿಡುವ ಅಪರಾಧದಲ್ಲಿ ನಾವು ಪಾಲುದಾರರಾಗುತ್ತೇವೆ. ಹೀಗಾಗಿ ನೆನೆಪೆಂಬುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.

ಕೃಪೆ: Economic and Political Weekly Oct 20, 2018. Vol. 53. No.42
ಅನು: ಶಿವಸುಂದರ್
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

ದೇಹ ತಾವು ಬಯಸದ ಹೊರಗಿನವರಾದ ಬುಡಕಟ್ಟು ಜನಾಂಗದ್ದಾಗಿ ಮತ್ತು ಮುಸ್ಲಿಮರದ್ದಾಗಿ ಮಾತ್ರ ಕಂಡಿತು. ಮತ್ತು ಈ ಅಪರಾಧ ಘೋರತೆಯೇ ಸಾಲದೆಂಬಂತೆ ಅತ್ಯಾಚಾರಿಗಳ ಪರವಾಗಿ ಹಿಂದೂ ಏಕತಾ ಮಂಚ್ ಒಂದು ಬಹಿರಂಗ ಪ್ರದರ್ಶನವನ್ನು ನಡೆಸಿತು.